ಮಂಗಳೂರು ಕಡೆಯ ರಕ್ತದಾನಿಗಳು ಕೇಸರಿ ರಕ್ತದವರು, ಇದು ಏಡ್ಸ್ ರೋಗಿಯ ರಕ್ತಕ್ಕಿಂತ ಮಾರಕ ಎಂದು ಹರೀಶ್ ಪೆರಾಜೆ ಪೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದರು. ಇದು ರಕ್ತದಾನಿಗಳು ಹಾಗೂ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಆ ಬಳಿಕ ಎಚ್ಚೆತ್ತ ಹರೀಶ್ ಪೆರಾಜೆ ಪೋಸ್ಟ್ ಡಿಲೀಟ್ ಮಾಡಿ ನನ್ನಿಂದ ಯಾರಿಗಾದರೂ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ” ನಾನು ನಿನ್ನೆ ಕೇಸರಿ ರಕ್ತದ ವಿಚಾರ ಚಿತ್ರ ನಟಿ ಮಾಳವಿಕ ಅವರ ಒಂದು ರಾಜಕೀಯ ಭಾಷಣಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಬೇರೆ ಬೇರೆ ರಕ್ತ ಹೋಲಿಕೆ ಸರಿ ಅಲ್ಲ ಎನ್ನುವ ಅಭಿಪ್ರಾಯದಲ್ಲಿ ಅರ್ಥ ಬರುವ ಹಾಗೆ ಒಂದು ಪೋಸ್ಟ್ ಮಾಡಿದ್ದೆ ಹೊರತು ಇದರಲ್ಲಿ ರಕ್ತ ದಾನಿಗಳಿಗೆ ಯಾವುದೇ ನೋವು ಅವಮಾನವಾಗುವ ರೀತಿ ಬರೆದಿಲ್ಲ. ಅಲ್ಲದೆ ಯಾವುದೇ ಧರ್ಮ ಸಂಘಟನೆಗೂ ಕೂಡ ಧಕ್ಕೆ ಮಾಡುವ ಉದ್ದೇಶವಿರಲಿಲ್ಲ. ನಾನು ಹಾಕಿದ ಪೋಸ್ಟ್ ಬಗ್ಗೆ ಸುಳ್ಯ ಹಿಂದೂ ಸಂಘಟನೆ ಖಂಡಿಸಿದ ವಿಚಾರ ತಿಳಿಯಿತು. ನಾನು ಹಿಂದೂ ಸಂಘಟನೆಯನ್ನು ಗುರಿ ಮಾಡಿಲ್ಲ. ಒಂದು ಈ ಪೋಸ್ಟ್ ಯಾರಿಗಾದರೂ ಅಪಾರ್ಥ ತಿಳಿದು ನೋವಾಗಿದ್ದರೆ ಕ್ಷಮೆ ಇರಲಿ. ನನ್ನ ಬರಹದಲ್ಲಿ ತಪ್ಪು ಇಲ್ಲದಿದ್ದರೂ ವಿವಾದಕ್ಕೆ ಆಸ್ಪದ ಬೇಡವೆಂದು ಡಿಲೀಟ್ ಮಾಡಿರುವೆ. ಸಾಮರಸ್ಯ ಸಮಾಜ ನಿರ್ಮಾಣಕ್ಕೆ ನನ್ನ ಮನಸ್ಸು ಸದಾ ಹಾತೊರೆಯುತ್ತದೆ ಹೊರತು ಸಮಾಜ ಕೆಡಿಸುವ ಯಾವ ಲವಲೇಶ ಉದ್ದೇಶವು ನನ್ನಲ್ಲಿಲ್ಲ ಎಂದು ಹರೀಶ್ ಪೆರಾಜೆ ಪೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.