ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರ ಜೊತೆಗೆ ನಿವೃತ್ತ ಸೇನಾನಿ ಚೌಟರು ಸೇರಿ ಹೇಗೆ ಭ್ರಷ್ಟಾಚಾರ ವಿರೋಧಿಸುತ್ತಾರೆ – ಲಕ್ಷ್ಮೀಶ ಗಬ್ಬಲಡ್ಕ.
ನಾ ಕಾವೂಂಗಾ ನಾ ಕಾನೇದೂಂಗ ಎನ್ನುವ ಮೋದಿಯವರು ನುಡಿದಂತೆ ನಡೆಯುವವರಲ್ಲ ಎನ್ನುವುದಕ್ಕೆ ಎಲೆಕ್ಟೋಲ್ ಬಾಂಡ್ ಸಾಕ್ಷಿ ನೀಡುತ್ತಿದೆ.
ಮೋದಿ ಬಾಂಡ್ ಹಗಲು ದರೋಡೆ ಮಾಡುತ್ತಿದೆ ಎಂದು ರಾಷ್ಟ್ರರಕ್ಷಾ ವೇದಿಕೆ ಸಮಿತಿಯ ಗೌರವ ಸದಸ್ಯರಾದ ಕೆಪಿ ಜಾನಿ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಕಳೆದ ಐದು ವರ್ಷಗಳಲ್ಲಿ ಸುಮಾರು 1200 ಕಂಪನಿಗಳು ಮತ್ತು ವ್ಯಕ್ತಿಗಳು 16000 ಕೋಟಿ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿವೆ. ಖರೀದಿಯಾದ ಬಾಂಡಗಳಲ್ಲಿ ಒಂದು ಕೋಟಿ ಮೌಲ್ಯದ ಬಾಂಡಿನ ಪ್ರಮಾಣ ಶೇ. 96.-ಬಾಂಡ್ ಖರೀದಿ ಮಾಡಿದ ಕಂಪನಿಗಳಲ್ಲಿ ಮೂಲಭೂತ ಸೌಕರ್ಯ, ಗಣಿಗಾರಿಕೆ, ಔಷಧ ಕಂಪನಿಗಳೇ ಹೆಚ್ಚು. ಈ ಕಂಪನಿಗಳು ಕೇಂದ್ರ ಸರ್ಕಾರದ ಕೃಪಾ ಕಟಾಕ್ಷವಿಲ್ಲದೆ ಅಕ್ರಮ ಲಾಭವನ್ನು ಮಾಡಲಾಗುವುದಿಲ್ಲ.
ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ತಮ್ಮ ಆದಾಯದ 10-40 ಪಟ್ಟು ಹೆಚ್ಚು ದೇಣಿಗೆಯನ್ನು ನೀಡಿವೆ ಅಲ್ಲದೇ ಸುಮಾರು 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ಮೇಲೆ ಐಟಿ ಅಥವಾ ಇಡಿ ರೇಡ್ ಆದ ಒಂದು ವಾರದ ತಿಂಗಳಿನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿವೆ. ಐಟಿ ಮತ್ತು ಇಡಿ ಕೇಂದ್ರ ಸರ್ಕಾರದ ಸುಪರ್ದಿನಲ್ಲಿರುವ ಸಂಸ್ಥೆಗಳು.
-ಕೋವಿಡ್ ಕಾಲಘಟ್ಟದಲ್ಲಿ ಅತಿ ಹೆಚ್ಚು ಶುಲ್ಕ ವಸೂಲಿ ಅಪರಾಧ ಮಾಡಿದ್ದ, ಅಸಮರ್ಪಕ ಕೋವಿಡ್ ಕಿಟ್ ಸರಬರಾಜು ಮಾಡಿದ್ದ, ಅತಿ ಹೆಚ್ಚು ದರಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಿ ಕೋವಿಡ್ ಕಾಲದಲ್ಲೂ ಸಾವಿರಾರು ಕೋಟಿ ಲಾಭ ಮಾಡಿದ್ದ ಯಶೋದಾ ಹಾಸ್ಪಿಟಲ್ಸ್, ಹೆಟಿರೋ ಮೆಡಿಕಲಸ್, ಟೊರೆನ್ಸ್ ಮೆಡಿಕಲ್ಸ್, ಸಿರಮ್ ಇನ್ಸಿಟ್ಯುಟ್ ಆಫ್ ಇಂಡಿಯಾಗಳು ಕೋವಿಡ್ ಕಾಲದಲ್ಲಿ ನೂರಾರು ಕೋಟಿ ಎಲೆಕ್ಟೋರಾಲ್ ಬಾಂಡ್ ಖರೀದಿ ಮಾಡಿವೆ. ಕೋವಿಡ್ ಕಾಲದ ನಿಯಂತ್ರಣಗಳೆಲ್ಲಾ ಕೇಂದ್ರದ ಮೋದಿ ಸರ್ಕಾರದ ಸುಪರ್ದಿಯಲ್ಲಿದ್ದವು.
ಎರಡನೇ ಅತಿ ದೊಡ್ಡ ದೇಣಿಗೆದಾರ ಮೇಘ ಇಂಜಿನಿಯರಿಂಗ್ ಮತ್ತು ಇನ್ನಾಸ್ಟ್ರಕ್ಟರ್ ಸಂಸ್ಥೆಯಂತೂ 1200 ಕೋಟಿ ದೇಣಿಗೆ ನೀಡಿದೆ. ಹಾಗೂ ಉಸ್ತುವಾರಿಯಲ್ಲಿರುವ 1.08 ಲಕ್ಷ ಕೋಟಿಗೂ ಹೆಚ್ಚು ಕಾಂಟ್ರಾಕ್ಟ್ ಪಡೆದುಕೊಂಡಿವೆ. ಅದರಲ್ಲಿ ಸರ್ಕಾರದ ಸಿಎಜಿ ಸಂಸ್ಥೆಯೆ ಆಪಾಯಕಾರಿ ಎಂದು ಹೇಳಿರುವ 38,000 ಸಾವಿರ ಕೋಟಿ ಮೊತ್ತರ ತೆಲಂಗಣದ ಕಾಲೇಶ್ವರ ನೀರಾವರಿ ಯೋಜನೆಯೂ ಒಂದು. ಕೇಂದ್ರ ಸರ್ಕಾರದ
-ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅತಿ ಹೆಚ್ಚು ಎಲೆಕ್ಟೋರಲ್ ಬಾಂಡ್- 1238 ಕೋಟಿ ರೂ.- ಖರೀದಿ ಮಾಡಿರುವುದು ಲಾಟರಿ ಕಿಂಗ್ ಸ್ಯಾನ್ಸಿಯಾಗೋ ಮಾರ್ಟಿನ್ ಮಾಲೀಕತ್ವದ ಪ್ಯೂಚರ್ ಗೇಮಿಂಗ್ ಕಂಪನಿ. 1988 ರಲ್ಲಿ ಈತ ಬರ್ಮಾದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೊಯಮತ್ತೂರು ನಿವಾಸಿ. ಆದರೆ ಡಿಎಂಕೆ, ಸಿಪಿಎಂ. ಕಾಂಗ್ರೆಸ್ ಮತ್ತು ಅಂತಿಮವಾಗಿ ಬಿಜೆಪಿಯ ಸಖ್ಯವನ್ನು ಪಡೆದುಕೊಂಡು ಬಹಳ ಬೇಗನೇ ಭಾರತದ ಲಾಟರಿ ಕಿಂಗ್ ಆಗಿ ಬೆಳದ. ಈತ ಸಿಕ್ಕಿಂ ಸರ್ಕಾರ ಒಂದಕ್ಕೆ ಹಾಕಿರುವ ಟೋಪಿಯ ಮೊತ್ತ 4000 ಕೋಟಿ. ಈತನ ಪತ್ನಿ ಮತ್ತು ಮಗ ಈಗ ಬಿಜೆಪಿಯ ನಾಯಕರು.
ಈ ಎಲೆಕ್ಟೋರಲ್ ಬಾಂಡ್ ಹಗರಣ ಭಾರತದ ಅತಿದೊಡ್ಡ ಭ್ರಷ್ಟಾಚಾರದ ಹಗರಣವಾಗಿದೆ. ಹಲವು ಸಾವಿರ ಕೋಟಿ ಪಕ್ಷ ದೇಣಿಗೆ ಪಡೆದುಕೊಂಡು ಪ್ರಧಾನವಾಗಿ ಮೋದಿ ಸರ್ಕಾರ ಲಕ್ಷಾಂತರ ಕೋಟಿ ಸ್ವತ್ತನ್ನು, ಕಾಂಟ್ರಾಕಟನ್ನು ದೇಣಿಗೆ ನೀಡಿದವರಿಗೆ ನೀಡಿದೆ. ಐಟಿ-ಇಡಿಗಳನ್ನು ಗೂಂಡಗಳಂತೆ ಬಳಸಿಕೊಂಡು ಬಾಂಡ್ ದರೋಡೆ ಮಾಡಿದೆ.ಭಾರತದ ಡೆಮಾಕ್ರಸಿಯನ್ನು ಹೀಗೆ ಕಾರ್ಪೊರೇಟೋಕ್ರಸಿ ಮಾಡಿರುವುದರಲ್ಲಿ ಪ್ರಧಾನ ಪಾಲು ಮೋದಿ ಸರ್ಕಾರದ್ದು ಮತ್ತು ಬಿಜೆಪಿ ಪಕ್ಷದ್ದು. ಈ ಕಾರಣಕ್ಕೆ ಭಾರತದ ಪ್ರಜಾತಂತ್ರದ ಪ್ರಧಾನ ಶತ್ರು ಬಿಜೆಪಿಯೇ ಎಂದು ಕೆಪಿ ಜಾನಿ ಹೇಳಿದರು.
ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರ ಜೊತೆಗೆ ನಿವೃತ್ತ ಸೇನಾನಿ ಚೌಟರು ಸೇರಿ ಹೇಗೆ ಭ್ರಷ್ಟಾಚಾರ ವಿರೋದಿಸುತ್ತಾರೆ – ಲಕ್ಷ್ಮೀಶ ಗಬ್ಬಲಡ್ಕ
ಭ್ರಷ್ಟಾಚಾರದ ವಿರುದ್ದ ಹೋರಾಟ ಎಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರ ಜೊತೆಗೆ ನಿವೃತ್ತ ಸೇನಾನಿ ಚೌಟರು ಸೇರಿ ಹೇಗೆ ಭ್ರಷ್ಟಾಚಾರವನ್ನು ತೊಲಗಿಸುತ್ತಾರೆ ಎಂಬುವುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು . ಅಲ್ಲದೇ ದೇಶದಲ್ಲಿ ಇದೀಗ ಬಿಜೆಪಿ , ಸಂಘ ಪರಿವಾರ ಗ್ಯಾರಂಟಿಯಾಗಿ ಉಳಿದಿಲ್ಲಾ ಇದೀಗ ಬಿಜೆಪಿ ಇದೀಗ ಸರ್ವಾಧಿಕಾರಿ ಕೈ ಕೆಳಗೆ ಅಡಗಿದೆ ಎಂದು ಹೇಳಿದರು. ಈ ಹಿಂದೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದ ನಾಯಕರನ್ನು ಇದೀಗ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ಸ್ವಚ್ಚವಾಗಿದ್ದು ಇದೀಗ ಬಿಜೆಪಿ ಭ್ರಷ್ಟರಿಂದ ತುಂಬಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಉಮ್ಮರ್ , ಅಶ್ರಫ್ , ಬಿಟ್ಟಿ ನಡುನೀಲಂ, ವಸಂತ ಪೆಲ್ತಡ್ಕ ಉಪಸ್ಥಿತರಿದ್ದರು.