ಸೌಜನ್ಯ ಪ್ರಕರಣವನ್ನು ಬಿಜೆಪಿ ಸರಿಯಾಗಿ ತನಿಖೆ ಮಾಡಬೇಕಿತ್ತು ಆದರೆ ಕಾಂಗ್ರೆಸ್ ಪ್ರಕರಣವನ್ನು ಸಿಬಿಐಗೆ ವಹಿಸಿದೆ – ವೆಂಕಪ್ಪ ಗೌಡ
ಸುಳ್ಯ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸುಳ್ಯದಲ್ಲಿನ ಅಭಿವೃದ್ಧಿ ಮತ್ತು ದಿನ ನಿತ್ಯದ ದಿನಸಿ ಸಾಮಾಗ್ರಿಗಳ ದರಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮನೆಮನೆ ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಎಂದು ಅವರು ಹೇಳಿದರು ಅಲ್ಲದೇ ಪತ್ರಿಕಾಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಳ್ಯದಲ್ಲಿನ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳ ಬಗ್ಗೆ ಮಾಹಿತಿ ಮತ್ತು ಬಿಜೆಪಿಯು ಇದೀಗ ಕೃಷಿಕ ಮತ್ತು ಜನತೆಗೆ ದಿನ ನಿತ್ಯ ಬಳಕೆಯ ವಸ್ತುಗಳು ಗಗನಕ್ಕೆ ಏರಿದ ಬೆಲೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಲಿದ್ದೆವೆ ಎಂದು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ವೆಂಕಪ್ಪ ಗೌಡ ಹೇಳಿದರು. ಕಾಂಗ್ರೆಸ್ ಬಡವರು ಮತ್ತು ನಾಡಿನ ಜನತೆಯ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಆದರೆ ಬಿಜೆಪಿ ಕಿವಿ ತುಂಬಿಸಿ ಸುಳ್ಳು ಸುದ್ದಿಗಳನ್ನೇ ಹರಡುತ್ತಿದೆ ಎಂದು ಹೇಳಿದರು. ಗ್ಯಾರಂಟಿಗಳನ್ನು ಈ ಹಿಂದೆ ಹರಿದವರು ಮುಂದೆ ಬಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ದ್ವೇಶದ ರಾಜಕಾರಣ ಮಾಡಲ್ಲಾ ಅದು ಬಿಜೆಪಿಯ ಸಂಸ್ಕೃತಿ ಎಂದು ಹೇಳಿದರು.
ಕೇಂದ್ರದ ಐದು ಅನ್ಯಾಯಗಳನ್ನು ನಾವು ಪ್ರಕಟ ಮಾಡಿದ್ದೆವೆ ಅದನ್ನು ಪೂರೈಸುತ್ತೆವೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವ ನ್ಯಾಯ ಉದ್ಯೋಗ ಕಲ್ಪಿಸುವ ನ್ಯಾಯ , ರೈತ ನ್ಯಾಯ , ರೈತ ನ್ಯಾಯದಲ್ಲಿ ಗೊಬ್ಬರಗಳ ಬೆಲೆ ಕಡಿತ , ಬೆಂಬಲ ಬೆಲೆ ಸೇರಿದಂತೆ ಕೃಷಿಕರ ಮಾರಟಗಳ ಜಿಎಸ್ ಟಿ ರದ್ದು , ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಕಾರ್ಯಕ್ರಮ ನಡೆದಲಿದ್ದೆವೆ ಎಂದರು . ನಾರಿ ನ್ಯಾಯ , ನಾರಿ ನ್ಯಾಯದಲ್ಲಿ ಬಡ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುತ್ತೆವೆ , ಶ್ರಮಿಕ್ ನ್ಯಾಯ , ಶ್ರಮಿಕ ನ್ಯಾಯದಲ್ಲಿ ಕೂಲಿ ಕಾರ್ಮಿಕರಿಗೆ ನಾಲ್ಕು ನೂರು ರೂಪಾಯಿಗಳನ್ನು ಹೆಚ್ಚಿಸುವ ಗ್ಯಾರಂಟಿ ನೀಡುತ್ತೆವೆ ಎಂದು ಹೇಳಿದರು ಅಲ್ಲದೆ ಅಸಂಗಟಿತ ಕಾರ್ಮಿಕರಿಗೆ ವಿಮೆ ನೀಡುತ್ತೆವೆ ಅಲ್ಲದೆ ಹಿಸೆದಾರಿ ನ್ಯಾಯದಲ್ಲಿ ಎಸ್ಸಿ , ಎಸ್ಟಿ , ಒಬಿಸಿ ಗಳಿಗೆ ನೀಡುವುದು ಹಿಸೆದಾರಿ ನ್ಯಾಯ ಮಾಡಿದ್ದೆವೆ ಎಂದು ಹೇಳಿದರು . ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಮಾದರಿಯಲ್ಲಿ ಕಾಂಗ್ರೆಸ್ ನಾಯಕರ ಸಹಿ ಇರುವ ಕಾರ್ಡ್ ಬರಲಿದೆ ಕರ್ನಾಟಕ ಮಾದರಿಯಲ್ಲಿ ಕೇಂದ್ರದಲ್ಲಿಯು ಅಧಿಕಾರಕ್ಕೆ ಕಾಂಗ್ರೆಸ್ ಬರಬೇಕು ಎಂದು ಅಭಿವೃದ್ಧಿ ಚಿಂತನೆಯೊಂದಿಗೆ ಕಾಂಗ್ರೆಸ್ ಪದ್ಮರಾಜ್ ರವರಿಗೆ ಮತ ನೀಡಬೇಕು ಕೇಳಿಕೊಂಡರು.
ನೋಟ ಬದಲಾಗಿ 2011 ರಲ್ಲಿ ನಡೆದ ಘಟನೆ ಅಲ್ವಾ ಹಾಗಾಗಿ ಡಿವಿಎಸ್ ಮುಖ್ಯಮಂತ್ರಿ ಆಗಿದ್ದರು ಆಗ ಅದರ ತನಿಖೆಯನ್ನು ನ್ಯಾಯಯುತವಾಗಿ ಮಾಡಬೇಕಿತ್ತು ನಂತರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಸಿಬಿಐಗೆ ನೀಡಿದ್ದೆವೆ ಅಲ್ಲವೇ ಇದೀಗ ಮಾಧ್ಯಮದ ಮೂಲಕ ಅವರಲ್ಲಿ ಸೌಜನ್ಯಪೂರ್ವಕವಾಗಿ ಕಾಂಗ್ರೆಸ್ ಗೆ ಮತನೀಡಿ , ನಿಮ್ಮ ಜೊತೆ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಸಹಾಯ ಮಾಡಿದ್ದೆವೆ ಅದಕ್ಕಾಗಿ ಪದ್ಮರಾಜ್ ಆರ್ ಪೂಜಾರಿಗೆ ಮತನೀಡಿ ಕಾಂಗ್ರೆಸ್ ಗೆದ್ದರೆ ನಿಮ್ಮಜೊತೆಗೆ ನಾವು ಈ ಹಿಂದೆ ನಿಂತಿದ್ದೆವು ಮುಂದೆಯು ನಿಲ್ಲುತ್ತೆವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ , ಭವಾನಿಶಂಕರ್ ಕಲ್ಮಡ್ಕ , ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.
- Saturday
- November 23rd, 2024