ನೋಟಕ್ಕೆ ಅಭ್ಯರ್ಥಿ ಗಳಿಗಿಂತ ಹೆಚ್ಚಿನ ಶಕ್ತಿ ಇದೆ , ತಾಯಂದಿರ ರಕ್ಷಣೆಗೆ ಈ ಮತ – ತಿಮರೋಡಿ:
ಬಿಜೆಪಿ ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಅಲ್ಲದೇ ಕಾಂಗ್ರೆಸ್ ಗೆ ಕೂಡ ಇದರಲ್ಲಿ ಪಾಲು ಇದೆ – ಮಹೇಶ್ ಶೆಟ್ಟಿ:
ಸುಳ್ಯ: ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗದೇ ಇರುವ ಹಿನ್ನಲೆಯಲ್ಲಿ ನೋಟಾ ಅಭಿಯಾನ ಹಮ್ಮಿದ ಕುರಿತಾಗಿ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಇಡೀ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್ ಕೂಡ ಪಾಲು ಇದೆ ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಸೌಜನ್ಯ ಅತ್ಯಾಚಾರಗೈದ ಕಮಾಂದರಿಗೆ ಶಿಕ್ಷೆ ಆಗಿಲ್ಲಾ ಎಲ್ಲಾ ಅಂಗಗಳನ್ನು ಬೇಡಿಕೊಂಡರು ಕು ಸೌಜನ್ಯಳಿಗೆ ನ್ಯಾಯ ಸಿಕ್ಕಿಲ್ಲಾ ಹಾಗಾಗಿ ನೋಟ ಅಭಿಯಾನ ಪ್ರಾರಂಭವನ್ನು ಮಾಡಿದ್ದೆವೆ . ಸಂವಿಧದಾನ ಏಕತೆಯನ್ನು ಬಹಿಷ್ಕಾರ ಮಾಡಿದಲ್ಲಿ ನಮ್ಮ ಮತದಾನದ ಹಕ್ಕು ಧರ್ಮವಲ್ಲ ಎಂಬ ನೆಲೆಯಲ್ಲಿ ನೋಟ ಅಭಿಯಾನ ಮಾಡಲು ಹೊರಟಿದ್ದೆವೆ .
ಸೌಜನ್ಯ ಪ್ರಕರಣ ತಾರ್ಕಿಕ ಅಂತ್ಯ ಹಾಡುವ ಸಲುವಾಗಿ ಸೌಜನ್ಯ ಪರ ಹೋರಾಟಗಾರರು ನೋಟ ಓಟಿನ ಬಿಕ್ಷೆಯನ್ನು ಬೇಡುತ್ತಿದ್ದೆವೆ. ಕಡಬ ತಾಲೂಕಿನ ಚಾರ್ವಕದ ಜನತೆ 2016 ರಲ್ಲಿ ತಾಕತ್ತನ್ನು ತೋರಿಸಿ ಕೊಟ್ಟಿದೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿಗಳಿಗು ಕೂಡ ನೋಟಕ್ಕೆ ಇರುವ ಶಕ್ತಿ ಇಲ್ಲಾ , ಅಲ್ಲದೇ ಬಿಹಾರದ ಗೋಪಾಲ್ ಗಂಜ್ ಕ್ಷೇತ್ರದಲ್ಲಿ ಅಲ್ಲಿನ ಜನತೆ ತೀರ್ಮಾನಿಸಿ ನೊಟ ಚಲಾಯಿಸುವ ಮೂಲಕ ಅಲ್ಲಿ ತಿರಸ್ಕಾರ ಮಾಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು . ನಾವು ಹಿಂದುತ್ವದ ರಕ್ಷಣೆಗೆ ಬಂದವರು ನೀವು ಅತ್ಯಚಾರಿಗಳ ಜೊತೆಗೆ ಸೇರಿಕೊಂಡು ನಮ್ಮ ಹೆಂಡತಿ ಮಕ್ಕಳನ್ನು ವ್ಯಭಿಚಾರಕ್ಕೆ ತಳ್ಳುತ್ತಿದ್ದಾರೆ ಆದರು ನೀವು ಬಿಜೆಪಿಯವರು ಇದ್ದಿರಲ್ಲಾ ಸಂಘ ಪರಿವಾರ ಇದೆಯಲ್ವಾ ಏನು ಮಾಡುತ್ತಿದ್ದಿರಿ ಎಂದು ಬಿಜೆಪಿಯ ವಿರುದ್ದ ಕಿಡಿ .
ಅಲ್ಪಸಂಖ್ಯಾತರನ್ನು ಹಿಡಿದು ಆಡಳಿತ ಮಾಡುತ್ತಾ ಇದ್ದಿರಲ್ಲ ನಿಮಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು ನಾವು ಏನು ಬಿಜೆಪಿ ಹಿಂದು ವಿರೋಧಿಗಳಲ್ಲ ಎಂದು ಹೆಗಡೆವಾರ್ ಹೇಳಿದ ಸನಾತನ ಧರ್ಮವನ್ನು ಅಪ್ಪಿ ಒಪ್ಪಿ ಬಂದವರು ಎಂದು ಹೇಳಿದರು . ಧರ್ಮ ಸಂಸ್ಕಾರ ವೇದಿಕೆಯಲ್ಲಿ ಹೆಣ್ಣನ್ನು ಕರೆದ ಪದವನ್ನು ನಿಮಿಗೆ ಕಲಿಸಿ ಕೊಟ್ಟಿದ್ದಾ ಎಂದು ಪ್ರಶ್ನಿಸಿದರು.
ಬಿಜೆಪಿ ಇಡೀ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಕಾಂಗ್ರೆಸ್ ಕೂಡ ಇದರಲ್ಲಿ ಪಾಲು ಇದೆ – ಮಹೇಶ್ ಶೆಟ್ಟಿ.
ಇಡೀ ಪ್ರಕರಣವನ್ನು ಕೊಲೆ ಆದ ಸಂದರ್ಭದಲ್ಲಿ ಇದೇ ಬಿಜೆಪಿಯೇ ಹಳ್ಳ ಹಿಡಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಕಾಂಗ್ರೆಸ್ ಏನು ಇದರಿಂದ ಹೊರತಾಗಿಲ್ಲಾ ಎಂದು ಹೇಳಿದರು . ಅಲ್ಲಿ 2002 ರಿಂದ 12ರ ವರೆಗೆ ನಾಲ್ಕುನೂರು ಹೆಣ್ಣಿನ ಅತ್ಯಾಚಾರ ಕೊಲೆ ಆಗಿದೆ ಅದನ್ನು ತನಿಖೆ ಬೇಡವೇ . ಒಕ್ಕಲಿಗರು ಇರುವ ನಾವು ಒಂದು ಮನೆಯಿಂದ ನಾಲ್ಕು ಮತಗಳನ್ನು ನೋಟ ನೀಡಿ ಒಕ್ಕಲಿಗರೆ ಮನವಿ ಮಾಡಿದರು. ಆ ಮಗುವಿಗೆ ಸಮರ್ಪಣೆ ಮಾಡಿ ಎಂದು ಹೇಳಿದರು . 12 ವರ್ಷಗಳಿಂದ ಈಗ ಅಲ್ಲಿ ಕೊಲೆ ಅತ್ಯಾಚಾರ ಆಗುತ್ತಿಲ್ಲ ಯಾಕೆ ಅಂದರೆ ನಾವು ಬೀದಿಯಲ್ಲಿ ಇರುವ ಕಾರಣಕ್ಕೆ ಆಗಿಲ್ಲಾ ಅಷ್ಟೇ ಎಂದು ಹೇಳಿದರು.
12 ವರ್ಷಗಳಿಂದ ನ್ಯಾಯಕ್ಕಾಗಿ ಪರದಾಡುತ್ತಿದ್ದೆವೆ ತಾಳ್ಮೆಯಲ್ಲಿ ಇದ್ದೆವೆ . ನಿಮ್ಮ ಜಾತಿಯ ಬಲದಿಂದ ಹಿಂದುತ್ವ ಬಡವಾಗಲಿದೆ . ನೋಟ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಕಣ್ಣು ತೆರೆಸಲು ಸಾಧ್ಯವೆಂದು ಹೇಳಿದರು ಈ ಹಿನ್ನೆಲೆಯಲ್ಲಿ ನಾವು ನಿಮ್ಮಲ್ಲಿ ನೋಟ ಬಿಕ್ಷೆಯನ್ನು ಬೇಡುತ್ತಿದ್ದೆವೆ ಸುಪ್ರೀಂನಲ್ಲಿ ಹೆಣ್ಣಿಗೆ ನ್ಯಾಯ ಕೊಡಿಸಲು ಸನಾತನ ತಾಯಂದಿರು ರಕ್ಷಣಗೆ ನೋಟ ಕೇಳುತ್ತಿದ್ದವೆ ಎಂದು ಹೇಳಿದರು .
ಕರುಣಾಕರ ಬರಮೇಲು ಮತನಾಡುತ್ತಾ ಹೋರಾಟಕ್ಕೆ ಬರಂಬಲ ಕೊಡಬೇಕು , ಸುಳ್ಯ ಜನತೆ ನೋಟ ಅಭಿಯಾನದಲ್ಲಿ ಭಾಗಿಯಾಗಬೇಕು ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ನಿಮ್ಮ ಮತಗಳೇ ಅಧಾರವಾಗಲಿದೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಾವು ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಮ್ಮಣ್ಣ ಶೆಟ್ಟಿ ಮತನಾಡುತ್ತಾ ಕಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿ ಸಿಗುತ್ತಾರೆ ಆದರೆ ಓರ್ವ ಹೆಣ್ಣಿನ ಅತ್ಯಚಾರ ಕೊಲೆಯ ಆರೋಪಿಗಳು ಸಿಕ್ಕಿಲ್ಲ ಇದು ಏನನ್ನು ಸೂಚಿಸುತ್ತದೆ ಹಾಗಿದ್ದರೆ ರಾಜಕಟರಣಿಗಳು ಎಷ್ಟು ಬ್ರಷ್ಟರು ಎಂಬುವುದು ಇದರಲ್ಲೆ ತಿಳಿಯುತ್ತದೆ ಎಂದು ಹೇಳಿದರು. ಕೆದಂಬಾಡಿ ರಾಮಯ್ಯ ಗೌಡರು ಹೋರಾಡಿದ ಈ ಮಣ್ಣಿನ ಮಗ ಅವರು ಅಂದು ಬ್ರಿಟಿಷರ ವಿರುದ್ದ ಹೋರಾಡಿದವರು ಇಂದು ಅವರ ಆದರ್ಶದಂತೆ ನಾವು ಹೋರಾಟ ಮಾಡುತ್ತೆವೆ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯತೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಲಜಾಕ್ಷ ಭೂತಕಲ್ಲು , ನ್ಯಾಯವಾದಿ ಮೋಹಿತ್ , ಜಯಂತ್ ಟಿ ನೀತಿ ತಂಡದ ಮುಖ್ಯಸ್ಥರು, ಎನ್ ವಂಸಂತ್ ಸೇರಿದಂತೆ ಸುಳ್ಯದ ಸೌಜನ್ಯ ಹೋರಾಟಗಾರರು ಉಪಸ್ಥಿತರಿದ್ದಾರೆ.
- Sunday
- November 24th, 2024