Ad Widget

ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ 19ನೇ ವರ್ಷದ ಸೌಹಾರ್ದ ಇಫ್ತಾರ್‌ಕೂಟ

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಅರಂತೋಡು ಇದರ ವತಿಯಿಂದ 19ನೇ ವರ್ಷದ “ಸೌಹಾರ್ದ ಇಫ್ತಾರ್‌ಕೂಟ” ಎಪ್ರಿಲ್ 8ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು. ತಿಂಗಳ 28ರ ಉಪವಾಸ ದಿನದಂದು ನಡೆದ ಇಫ್ತಾರ್‌ಕೂಟದಲ್ಲಿ ಸರ್ವಧರ್ಮದ ಅನೇಕ ಮಂದಿ ಪಾಲ್ಗೊಂಡಿದ್ದರು. ತೆಕ್ಕಿಲ್ ಪ್ರತಿಷ್ಟಾನದ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಮುಸಲ್ಮಾನ ಭಾಂದವರು ಒಂದು ತಿಂಗಳು ಉಪವಾಸ ಮಾಡುವುದರ ಜೊತೆಗೆ ಬಡ ಬಗ್ಗರಿಗೆ ದಾನ ಮಾಡುವುದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ ಎಂದರು ಕಳೆದ 18 ವರ್ಷಗಳಿಂದ ಸೌಹಾರ್ದ ಇಫ್ತಾರ್ ಮಾಡಿಕೊಂಡು ಬಂದಿರುವುದು ಎಲ್ಲಾ ಸಮುದಾಯದವರನ್ನು ಆಹ್ವಾನಿಸಿ ಸತ್ಕರಿಸುವ ಮೂಲಕ ಸಂಸ್ಥೆ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಅಭಿನಂದಿಸಿದರು ,ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸದಸ್ಯರಾದ ಅಶೋಕ್ ಎಡಮಲೆ, ನಿವೃತ್ತ ಮುಖ್ಯೋಪಾದ್ಯಾಯ ದಾಮೋದರ ಮಾಸ್ತರ್, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಮುಸ್ತಫ, ನಗರ ಪಂಚಾಯತ್‌ನ ಮಾಜಿ ಸದಸ್ಯ ಗೋಕುಲ್‌ದಾಸ್, ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಪ್ರತಿಷ್ಟಾನದ ಮತ್ತು ಟಿ ಎಂ ಶಾಹಿದ್ ತೆಕ್ಕಿಲ್ ಅವರ ಸಮಾಜ ಸೇವೆಯನ್ನು ಕೊಂಡಾಡಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ಗುತ್ತಿಗಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ, ಅರಂತೋಡು ಭಜನಾ ಮಂದಿರ ಅಧ್ಯಕ್ಷ ಕೆ.ಆರ್. ಪದ್ಮನಾಭ ಕುರುಂಜಿ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ| ಹರ್ಷವರ್ಧನ ಕುತ್ತಮೊಟ್ಟೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ಧೀನ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ, ಪಿ.ಎ. ಮಹಮ್ಮದ್ ಸುಳ್ಯ, ತಾಜ್ ಮೊಹಮ್ಮದ್ ಸಂಪಾಜೆ, ಹಾಜಿ ಹೆಚ್.ಎ. ಅಬ್ಬಾಸ್ ಸೆಂಟ್ಯಾರ್, ಸುನ್ನಿಮಹಲ್ ಅಧ್ಯಕ್ಷ ಹಮೀದ್ ಹಾಜಿ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ನಾಮ ನಿರ್ದೇಶಕ ಸದಸ್ಯರಾದ ಸಿದ್ದೀಕ್ ಕೊಕ್ಕೊ, ರಾಜುಪಂಡಿತ್, ಭಾಸ್ಕರ ಪೂಜಾರಿ, ಭವಾನಿಶಂಕರ ಕಲ್ಮಡ್ಕ, ನ್ಯಾಯವಾದಿಗಳಾದ ಅಬೂಬಕ್ಕರ್ ಅಡ್ಕಾರ್, ಮೂಸಾ ಪೈಂಬಚ್ಚಾಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಸದಸ್ಯ ಅಬುಸಾಲಿ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಉಪಾಧ್ಯಕ್ಷ ಟಿ.ಎಂ. ಶಾಝ್ ತೆಕ್ಕಿಲ್, ಟ್ರಸ್ಟಿ ಟಿ.ಎಂ. ಶಮೀರ್ ತೆಕ್ಕಿಲ್, ಕೋಶಾಧಿಕಾರಿ ಟಿ.ಎಂ. ಜಾವೇದ್ ತೆಕ್ಕಿಲ್, ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ಅಡ್ಕಾರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸುಳ್ಯ ತಲೂಕು ಜಮೀಯತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ. ಅಬೂಬುಕ್ಕರ್ ಪಾರೆಕ್ಕಲ್, ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉನೈಸ್ ಪೆರಾಜೆ, ಮುಖ್ಯೋಪಾದ್ಯಾಯ ಸಂಪತ್, ಪಠೇಲ್ ಚಾರಿಟೇಬಲ್ ಅಧ್ಯಕ್ಷ ಬದ್ರುದ್ದೀನ್ ಪಠೇಲ್, ಎಸ್ ಕೆ ಎಸ್ ಎಸ್ ಎಫ್ ನ ಖಲಂದರ್ ಎಲಿಮಲೆ,ಎಸ್ ಎಸ್ ಎಫ್ ನ ಸಿದ್ದಿಕ್ ಕಟ್ಟೆಕ್ಕಾರ್, ಇವಾರ್ತೆ lಯ ರಶೀದ್ ಜಟ್ಟಿಪಳ್ಳ, ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಯಶ್ವಿತ್ ಕಾಳಮನೆ, ಕೃಷ್ಣ ಬೆಟ್ಟ, ಶರೀಫ್ ಜಟ್ಟಿಪಳ್ಳ, ಹನೀಫ್ ಸೆಂಟ್ಯಾರ್, ಎಸ್.ಎಂ. ಅಬ್ದುಲ್ ಮಜೀದ್, ತಿಮ್ಮಯ್ಯ ತೊಡಿಕಾನ, ಅಣ್ಣಾದೊರೈ ಅಡ್ಯಡ್ಕ, ಚಂದ್ರಶೇಖರ ಮಾಸ್ತರ್ ಕಲ್ಲುಗದ್ದೆ ಮೊದಲಾದವರು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!