Ad Widget

ಮರ್ಕಂಜ ಗಣಿಗಾರಿಕೆ ನಿಲ್ಲಿಸುವಂತೆ ಊರವರ ಮನವಿಗೆ ಸ್ಪಂದಿಸಿದ ತಾಲೂಕು ಆಡಳಿತ – ಗಣಿಗಾರಿಕೆ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ !

. . . . .

ಕೆಲವು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಮರ್ಕಂಜದ ಅಳವುಪಾರೆ ಗಣಿಗಾರಿಕೆ ಕೆಲವು ದಿನದ ಹಿಂದೆ ಪುನರಾರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಊರವರು ಸೇರಿ ಸುಳ್ಯ ತಹಶೀಲ್ದಾರರಿಗೆ ಮನವಿ ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ವಿನಂತಿಸಿದ್ದರು ಇಲ್ಲದಿದ್ದರೆ ಈ ಭಾರಿಯ ಲೋಕಸಭೆ ಚುನಾವಣೆ ಬಹಿಷ್ಕಾರಿಸುವ ಬಗ್ಗೆ ತಿಳಿಸಿದ್ದರು. ಇವರ ಮನವಿಗೆ ಸ್ಪಂಧಿಸಿದ ಸುಳ್ಯ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಜಿ ಮಂಜುನಾಥ್ ನಿನ್ನೆಯೇ ಸಂಜೆ ಸ್ಥಳಕ್ಕೆ ಭೇಟಿ ‌ನೀಡಿದರು. ಆ ಸಂದರ್ಭವು ಮಾಹಿತಿ ತಿಳಿದ ಸ್ಥಳೀಯರು ಜಮಾಯಿಸಿ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಇದೀಗ ತಾತ್ಕಾಲಿಕವಾಗಿ ಗಣಿಗಾರಿಕೆ ನಿಲ್ಲಿಸುವಂತೆ ಗಣಿಗಾರಿಕೆ ನಡೆಸುವವರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದ್ದು ಈ ಕುರಿತು ತಾಲೂಕು ದಂಡಾಧಿಕಾರಿಗಳನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲಾ.

Related Posts

error: Content is protected !!