Ad Widget

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಎಸ್ ಸಿ ಮೋರ್ಚಾದ ಪ್ರಮುಖರ ಸಭೆ

2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಸಂಘಟನಾತ್ಮಕವಾಗಿ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪಕ್ಷದ ಬಲವರ್ಧನೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ ಸಿ ಮೋರ್ಚಾದ ಪ್ರಮುಖರ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಏಪ್ರಿಲ್ 6 ರಂದು ಬಿಜೆಪಿ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಮತ್ತು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಏಪ್ರಿಲ್ 8ರಂದು ತಾಲೂಕು ಮಹಿಳಾ ಸಮಾವೇಶದಲ್ಲಿ ಕೂಡ ಮಹಿಳೆಯರು ಹೆಚ್ಚು ಭಾಗವಹಿಸಿಕೊಳ್ಳಲು ಸಂಪರ್ಕಗೊಳಿಸುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನಗೊಳಿಸಲಾಯಿತು. ಸುಳ್ಯ ತಾಲೂಕು ಹಾಗೂ ಕಡಬ ತಾಲೂಕಿನ ಬಿಜೆಪಿ ಎಸ್ಸಿ ಮೋರ್ಚ ಕಡೆಯಿಂದ ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ಸದಸ್ಯರು,ದೇವಸ್ಥಾನ ವ್ಯವಸ್ಥಾಪನ ಸಮಿತಿಯಲ್ಲಿ ಜವಾಬ್ದಾರಿ ಹೊಂದಿರುವ ಸದಸ್ಯರು ಕಾಲೋನಿಯ ಎಲ್ಲ ಪ್ರಮುಖರುಗಳ ಸಭೆಯನ್ನು ಏಪ್ರಿಲ್ 15ರಂದು ನಡೆಸುವ ಬಗ್ಗೆ ತೀರ್ಮಾನ ಗೊಳಿಸಲಾಯಿತು. ಸಭಾ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರದ ವೆಂಕಟ್ ವಳಲಂಬೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ರವೀಂದ್ರ ರೈ ಉಳಿದೋಟ್ಟು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ, ಮನೋವಳಿಕೆ, ಎಸ್ಸಿ ಮೋರ್ಚಾದ ಅಧ್ಯಕ್ಷ ವಿಜಯ ಅಲಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಜಿ ಜಗನ್ನಾಥ ಜಯನಗರ, ಕೊರಗಪ್ಪ ಎ ರಟ್ಟಾಡಿ ಉಪಸ್ಥಿತರಿದ್ದರು. ಸಭೆಗೆ ಎಸ್ಸಿ ಮೋರ್ಚಾದ ಪ್ರಮುಖರಾದ ಕೃಷ್ಣ ಸುಳ್ಳಿ, ದಿನೇಶ್ ಪೆರಾಬೆ, ಜೀವನ್ ಪೇರಾಲು, ಚಂದ್ರ ರೆಂಜಾಳ, ಶುಶಾಂತ್ ವಿನೋದ್ ಆಲಡ್ಕ ಸಂದೀಪ್ ಕುತ್ತಮೊಟ್ಟೆ, ಉಮೇಶ್ ಮುಪ್ಪೇರ್ಯ, ಸಂಜಿತ್ ಹೈದಂಗೂರು, ಭಾರತಿ ನಾಲ್ಕೂರು, ಸಂಜಯ್ ಪೈಚಾರ್ ಚನಿಯ ಕಲ್ತಡ್ಕ, ಜಿಲ್ಲಾ ಕಾರ್ಯದರ್ಶಿ ಶಂಕರ್ ಪೆರಾಜೆ ಭಾಗವಹಿಸಿದ್ದರು. ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಿ ಜಗನ್ನಾಥ್ ಜಯನಗರ ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading