ಕುಕ್ಕೆ ಸುಬ್ರಹ್ಮಣ್ಯದ ಸಮೀಪ ಏನೆಕಲ್ಲು ಗ್ರಾಮದ ಬೂದಿಪಳ್ಳದಲ್ಲಿ ಅತ್ಯಾಧುನಿಕ ಸೌಲಭ್ಯ್ಲಗಳೊಂದಿಗೆ ನಿರ್ಮಾಣಗೊಂಡ ದ ರಾಯಲ್ ಮೊಂಟಾನಾ ಹೋಟೆಲ್ ಮತ್ತು ರೆಸಾರ್ಟ್ ಇಂದು ಶುಭಾರಂಭಗೊಂಡಿತು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸತನ ತಂದು ಸಾಧನೆ ಮಾಡಿದ ಬೆಂಗಳೂರಿನ ರಾಯಲ್ ಎಂಟರ್ ಪ್ರೈಸಸ್ ರಾಜ್ಯದ ವಿವಿಧೆಡೆ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿದೆ.
ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿದಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯಸ್ಥರು ದಿ.ರಾಯಲ್ ಎಂಟರ್ ಪ್ರೈಸಸ್ ಮುಖ್ಯಸ್ಥ ಹರ್ಷ ಪುಟ್ಟಪ್ಪ & ಶ್ರೀಮತಿ ರೂಪ, ದಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್ ನಿರ್ದೇಶಕರಾದ ಕು. ಧನುಶ್ರೀ & ಗಗನ್ ಹರ್ಷ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ರವಿಶಂಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಇಲ್ಲಿ ಸುಮಾರು 1,000 ಸಾವಿರ ಮಂದಿ ಪಾಲ್ಗೊಳ್ಳಬಹುದಾದ ಮದುವೆ ಲಾನ್, 400 ಆಸನ ಸಾಮರ್ಥ್ಯದ ಮಿನಿ ಹಾಲ್, ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಕಿಚನ್, ಅತ್ಯಾಧುನಿಕ ಎಸಿ, ನಾನ್ ಎಸಿ ಸೌಲಭ್ಯದ 29 ಕೊಠಡಿಗಳು, ಹಸಿರ ಮಡಿಲಿನಲ್ಲಿ ಸುಂದರ ಕಾಟೇಜ್ಗಳು, 100ಕ್ಕೂ ಅಧಿಕ ಕಾರ್ ಪಾರ್ಕಿಂಗ್ ಸೌಲಭ್ಯ ಹೊಂದಿದೆ.