ವಿದ್ಯಾರ್ಥಿವೇತನಕ್ಕಾಗಿ ಏ. ೧೦ ರಂದು ಆನ್ ಲೈನ್ ಪರೀಕ್ಷೆ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ ಇದರ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು ತಮ್ಮ ತಂದೆಯವರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರ ಹೆಸರಿನಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕಲಿಕೆಗೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ‘ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿ ವೇತನ’ ನೀಡುವ ಸಲುವಾಗಿ ಆನ್ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್ಲೈನ್ ಮುಖಾಂತರ ಏ. ೧೦ರಂದು ನಡೆಸಲಾಗುವ ಈ ಪರೀಕ್ಷೆಗೆ, ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಏ. ೮ರ ಮೊದಲು ಕಾಲೇಜು ವೆಬ್ಸೈಟ್ ನಲ್ಲಿರುವ ಲಿಂಕ್ ನ್ನು ಬಳಸಿಕೊಂಡು ನೊಂದಾಯಿಸಿಕೊಳ್ಳಬಹುದು. ಈ ಪರೀಕ್ಷೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕಾಲೇಜಿನ ಬೋಧನಾಶುಲ್ಕದಲ್ಲಿ ಶೇ. ೧೦೦ರ ವರೆಗೆ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳ ಅಇಖಿ ಮಾದರಿಯ ಒಟ್ಟು ೧೦೦ ಪ್ರಶ್ನೆಗಳನ್ನು ಒಳಗೊಂಡಿದ್ದು ಕಾಲಾವಧಿಯು ಒಟ್ಟು ೧೦೦ ನಿಮಿಷಯಗಳಾಗಿರುತ್ತದೆ. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅಥವಾ ಟಚ್ ಸ್ಕ್ರೀನ್ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ವ್ಯವಸ್ಥೆಯೊಂದಿಗೆ ನೊಂದಾಯಿತ ವಿದ್ಯಾರ್ಥಿಗಳು ಮನೆಯಿಂದಲೇ ಏ. ೧೦ರಂದು ಪರೀಕ್ಷೆ ಬರೆಯಬಹುದಾಗಿದೆ. ನೋಂದಣಿ ಹಾಗೂ ಪರೀಕ್ಷಾಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಕೆ.ವಿ.ಜಿ. ವಿದ್ಯಾರ್ಥಿವೇತನದ ಪರೀಕ್ಷೆಯಲ್ಲಿ ಸೂಕ್ತ, ಅರ್ಹತೆ ಪಡೆದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್ ಶಿಕ್ಷಣದ ವ್ಯಾಸಂಗಕ್ಕೆ ಇದೊಂದು ಸುವರ್ಣಾವಕಾಶ. ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗವು ಪ್ರೊ. ಪ್ರಶಾಂತ್ ಕೆ. ಯವರ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಪ್ರಸಿದ್ಧ ಕಂಪೆನಿಗಳೊಂದಿಗೆ ಉತ್ತಮ ಒಡನಾಟ ಹೊಂದಿದೆ. ೨೦೨೩-೨೪ನೇ ಶೈಕ್ಷಣಿಕ ವರ್ಷದ ಅರ್ಧಭಾಗದಲ್ಲಿಯೇ ೭೦ ಶೇಕಡಾ ಅರ್ಹ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿರುತ್ತಾರೆ. ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹಲವಾರು ಕಂಪೆನಿಗಳು ಕಾಲೇಜಿಗೆ ಭೇಟಿ ನೀಡಲಿವೆ. ತಮ್ಮ ಕಂಪೆನಿಗಳಿಗೆ ಉದ್ಯೋಗಿಗಳಾಗಿ ಆಯ್ಕೆ ಮಾಡಲು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ IBM, Sasken, Infosys, Toyota, Wipro, Tessolve, Biju’s, TCS (TATA), L&T, Robosoft, SLK oftware, Tech Mahindra, Wipfli ಮತ್ತು ಇನ್ನೂ ಹಲವಾರು ಪ್ರತಿಷ್ಠಿತ ಕಂಪೆನಿಗಳು ಭೇಟಿ ನೀಡಿ ಸಂದರ್ಶನಗಳನ್ನು ಆಯೋಜಿಸುತ್ತವೆ. ಡಾ. ರೇಣುಕಾಪ್ರಸಾದ್ ಕೆ.ವಿ., ಚೇರ್ಮೆನ್, ಕಮಿಟಿ ‘ಬಿ’ ಎ.ಒ.ಎಲ್.ಇ(ರಿ), ಸುಳ್ಯ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಮತ್ತು ಪ್ರಾಂಶುಪಾಲ ಡಾ. ಸುರೇಶ ವಿ.ಯವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿವೇತನ ಪರೀಕ್ಷೆಯ ಜವಾಬ್ದಾರಿಯನ್ನು ಪರೀಕ್ಷೆಯ ಸಂಯೋಜಕರಾದ ಡಾ. ಲೇಖಾ ಬಿ.ಎಂ. ಪಠ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ್ ಎ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಕುಸುಮಾಧರ್ ಎಸ್, ಡೀನ್ ಅಡ್ಮಿಷನ್ ಪ್ರೊ. ಬಾಲಪ್ರದೀಪ್ ಕೆ.ಎನ್, ತಂತ್ರಾಂಶ ಸಮಿತಿ ಸಂಯೋಜಕ ಪ್ರೊ. ವೆಂಕಟೇಶ್ ಯು.ಸಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ವಹಿಸಿಕೊಂಡಿರುತ್ತಾರೆ. ಸ್ಕಾಲರ್ಶಿಪ್ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆಗಳು: 9845866528 ಮತ್ತು 9742178252 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
- Thursday
- November 21st, 2024