Ad Widget

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಚುನಾವಣಾ ಕಛೇರಿ ಉದ್ಘಾಟನೆ ಕಾರ್ಯಕರ್ತರ ಸಭೆ



ರೈ , ಪದ್ಮರಾಜ್, ಶ್ರೀ ಕೃಷ್ಣ ಮತ್ತು ಅರ್ಜುನನಂತೆ ಕೆಲಸ ಮಾಡುತ್ತಾರೆ – ಸೊರಕೆ

. . . . . . . . .



ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಚುನಾವಣಾ ಕಛೇರಿ ಉದ್ಘಾಟನೆ ಕಾರ್ಯಕರ್ತರ ಸಭೆಯು ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ ಇವರು ಕುದ್ರೋಳಿ ದೇವಾಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲಾ ವರ್ಗದ ಜನರಿಗು ಒಳಿತನ್ನು ಮಾಡುತ್ತಾ ಉಚಿತ ನೋಟರಿ ಕೆಲಸ ಮಾಡುತ್ತಾ ಹಲವಾರು ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರನ್ನು ಗೆಲ್ಲಿಸುವ ಪಕ್ಷದ ಸೇನಾನಿಗಳಾಗಿ ಕೆಲಸ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳಲ್ಲಿ ಹೇಳಿದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡುತ್ತಾ ರಾಮನಾಥ ರೈ ಮತ್ತು ಪದ್ಮರಾಜ್ ಶ್ರೀ ಕೃಷ್ಣ ಮತ್ತು ಅರ್ಜುನನಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಕೊಡಗು ಮೈಸೂರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕರುಗಳ ಪರ್ಸ್ ಗಳು ಕಳೆದು ಹೋಗಿದ್ದು ಇವುಗಳನ್ನು ಅಲ್ಲಿ ಕಳ್ಳತನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದೆ ಹಾಗಿದ್ದರೆ ಅಲ್ಲಿ ಸೇರಿದವರು ಯಾರು ಎಂದು ಪ್ರಶ್ನಿಸಿದರು. ಈ ಭಾರಿಯ ಚುನಾವಣೆಯಲ್ಲಿ 20 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಕಾಣುತ್ತೆವೆ ಎಂದು ಹೇಳಿದರು. ಬಿಎಸ್ ವೈ ಕುಟುಂಬದ ವಿರುದ್ದ ಬಿಜೆಪಿ ನಾಯಕರೆ ಈ ಭಾರಿ ತಿರುಗಿ ಬಿದ್ದಿದ್ದು ಅವರ ಸರ್ವಾಧಿಕಾರಿ ಧೋರಣೆಯನ್ನು ಸಿ ಟಿ ರವಿ, ಸದಾನಂದ ಗೌಡ, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರನ್ನೆ ಕಡೆಗಣನೆ ಮಾಡಲಾಗಿದೆ ಅಲ್ಲದೆ ಆರು ಭಾರಿ ಗೆದ್ದಿರುವ ಶಾಸಕ ಎಸ್ ಅಂಗಾರರಿಗೆ ಟಿಕೇಟ್ ನಿರಾಕರಣೆಯನ್ನು ಕೂಡ ಪ್ರಶ್ನಿಸಿದರು. ಈ ಸಮಾರಂಭದ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ , ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿ , ರಮಾನಾಥ ರೈ ,  ಐವನ್ ಡಿಸೋಜ , ಧನಂಜಯ ಅಡ್ಪಂಗಾಯ , ಪಿ ಸಿ ಜಯರಾಮ , ಮಮತ ಗಟ್ಟಿ , ಕೃಷ್ಣಪ್ಪ , ಡಾ.ರಘು , ಇಸಾಕ್ ಸಾಹೇಬ್ , ವೆಂಕಪ್ಪ ಗೌಡ ಉಪಸ್ಥಿತರಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading