ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸುಳ್ಯದಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿಸಿ ಬೆಳೆಸಿದ ಪಕ್ಷವಿದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು. ತಮ್ಮ ಜಿಲ್ಲೆಗೆ ಮೋದಿಯವರ ಅವಧಿಯಲ್ಲಿ 1 ಲಕ್ಷದ 13 ಸಾವಿರ ಕೋಟಿ ರೂಪಾಯಿಗಳನ್ನು ತಂದು ಮೊದಲ ಬಾರಿ ಗೆಲುವು ಕಂಡಾಗ ಹೇಳಿದ ಮಾತಿನಂತೆ ರಸ್ತೆಗಳ ಅಭಿವೃದ್ಧಿಯನ್ನು ಮಾಡಿದ್ದೇನೆ ಅಲ್ಲದೆ ಈ ಭಾರಿಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಮ ಮಂದಿರ , ಆರ್ಟಿಕಲ್ 370 ವಿಧಿ ಸೇರಿದಂತೆ ಇತರ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಪ್ರತಿ ಚುನಾವಣೆಯಲ್ಲಿ ಕಮಲ ಚಿಹ್ನೆಯ ಗೆಲುವಿಗೆ ಸುಳ್ಯದ ಕೊಡುಗೆ ಅಪಾರ ಎಂದು ಹೇಳಿದರು.
ದೇಶ ದ್ರೋಹದ ಕೆಲಸ ಮಾಡುತ್ತಿದ್ದ ಪಿ ಎಫ್ ಐ ನಿಷೇಧಕ್ಕೆ ಸುಳ್ಯವೇ ಕಾರಣ
ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭದಲ್ಲಿ ಕೆಲವೇ ಗಂಟೆಗಳಲ್ಲಿ ಎನ್ ಐ ಎ ಆಗಮಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲುಗಟ್ಟಿದೆ. ಅಲ್ಲದೆ ಪಿ ಎಫ್ ಐ ಬ್ಯಾನ್ ಮಾಡಲು ಸುಳ್ಯವೇ ಕಾರಣ ಎಂದು ಹೇಳಿದರು.
ಮಾಜಿ ಸಚಿವರಾದ ಎಸ್ ಅಂಗಾರ ಮಾತನಾಡುತ್ತಾ ಗೆಲ್ಲುವ ಆತ್ಮವಿಶ್ವಾಸವಿದ್ದರೂ ನಾವು ಅದಕ್ಕೆ ಬೇಕಾದ ಕೆಲಸ ಕಾರ್ಯಗಳು ಮಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಇದ್ದಾಗಲೂ ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ ಅಭಿವೃದ್ಧಿಯಲ್ಲಿ ಎಲ್ಲಿಯು ಕುಂಟಿತವಾಗಿಲ್ಲ ಎಂದು ಹೇಳಿದರು . ನಮ್ಮ ಅಭಿವೃದ್ಧಿಯನ್ನು ಪ್ರಚಾರ ಪಡಿಸುತ್ತಾ ಹೋಗಿಲ್ಲ ಹಾಗಾಗಿ ಅದು ಕಾಣುವುದಿಲ್ಲ ಪಕ್ಷ ಯಾವುದೇ ಅಧಿಕಾರದಲ್ಲಿ ಇದ್ದರೂ ಸಾವಿರಾರು ಕೋಟಿಗಳ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ಮಾದರಿಯಲ್ಲಿ ನಮ್ಮ ಶಾಸಕರು ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆಗಳನ್ನು ನೀಡಿದರು .
ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮಾತನಾಡುತ್ತಾ ಸುಳ್ಯಕ್ಕೆ ನೀಡಬೇಕಾದ ಅನುದಾನಗಳನ್ನು ಕಾಂಗ್ರೆಸ್ ಸರಕಾರ ಬೇರೆ ಬೇರೆ ಕಡೆಗಳಿಗೆ ವರ್ಗಾಯಿಸಿದೆ. ಪರಿಶಿಷ್ಟ ಜಾತಿಗೆ ನೀಡಬೇಕಾದ ಅನುದಾನವನ್ನು ಸರಿಯಾಗಿ ನೀಡುತ್ತಿಲ್ಲ ಸುಳ್ಯಕ್ಕೆ ಕೇವಲ ಒಂದು ಕೋಟಿ ರೂಪಾಯಿಗಳನ್ನು ಮಾತ್ರ ನೀಡಿದ್ದಾರೆ ಎಂದು ಹೇಳಿದರು.
ರಾಮ ಮತ್ತು ಕೃಷ್ಣನ ಪರವಾದ ಚುನಾವಣೆ – ಹರೀಶ್ ಪೂಂಜ
ಹಿಂದುತ್ವಕ್ಕೆ ಇರುವ ಒಂದು ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಈ ಭಾರಿಯ ಚುನಾವಣೆಯು ರಾಮ ಮತ್ತು ಕೃಷ್ಣನ ಮೇಲೆ ನಡೆಯುವ ಚುನಾವಣೆ. ರಾಮಲಲ್ಲಾ ಪ್ರತಿಷ್ಟಾಪನೆ ಆಗಿದೆ, ಇನ್ನು ಮಥುರೆಯಲ್ಲಿ ಕೃಷ್ಣನ ದೇಗುಲ ಆಗಬೇಕಿದೆ. ಅದಕ್ಕಾಗಿ ಈ ಬಾರಿಯ ಚುನಾವಣೆ ನಡೆಯಲಿದೆ ಎಂದು ಹೇಳಿದರು. ಸುಳ್ಯಕ್ಕೆ ನಾವು ಹೇಳಬೇಕಾದದ್ದು ಏನು ಇಲ್ಲಾ ಆದರೂ ಇಲ್ಲಿಂದ ಕನಿಷ್ಠ 60 ಸಾವಿರ ಮತಗಳ ಲೀಡ್ ಬರುವಂತೆ ಕೆಲಸ ಮಾಡಬೇಕು. ಸುಳ್ಯಕ್ಕೆ ಮತ್ತೆ ಮತ್ತೆ ಬರುವುದಾಗಿ ಕಾರ್ಯಕರ್ತರಿಗೆ ತಿಳಿಸಿದರು.
ಇದು ಭಾರತವನ್ನು ಗೆಲ್ಲಿಸುವ ಚುನಾವಣೆ – ಪ್ರತಾಪ್ ಸಿಂಹ
2024 ರ ಚುನಾವಣೆಯು ಭಾರತವನ್ನು ಗೆಲ್ಲಿಸುವ ಚುನಾವಣೆ. ಈ ಚುನಾವಣೆಯಲ್ಲಿ ಭಾರತವನ್ನು ಗೆಲ್ಲಿಸಲು ಕಮಲದ ಚಿಹ್ನೆಗೆ ಮತ ನೀಡಬೇಕು ಎಂದು ಹೇಳಿದರು .
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರೀಜೇಶ್ ಚೌಟ ವೇದಿಕೆ ಏರುವ ಮೊದಲೇ ಸುಳ್ಯದ ಸಂಪೂರ್ಣ ಚಿತ್ರಣ ನನಗೆ ಗೊತ್ತಿದೆ ಇಲ್ಲಿನ ಮಂಗಳೂರು ಬೆಂಗಳೂರು ಹೆದ್ದಾರಿ , ರೈಲ್ವೆ , ಸೇರಿದಂತೆ ಕೃಷಿಕರ ಬವಣೆ ನೀಗಿಸುವ ಕೆಲಸಗಳು ಮಾಡುತ್ತೇನೆ ಎಂದು ಹೇಳಿದರು. ಹಿಂದುತ್ವ ಮತ್ತು ಅಭಿವೃದ್ಧಿಯ ಮೂಲಮಂತ್ರಗಳೊಂದಿಗೆ ಈ ಬಾರಿಯ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು .ಕೇಂದ್ರ ಮತ್ತು ರಾಜ್ಯದ ಅನುದಾನ ಬಳಸಿಕೊಂಡು ಅಭಿವೃದ್ಧಿಯನ್ನು ಮಾಡುತ್ತೆನೆ ಎಂದು ಹೇಳಿದರು .
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡುತ್ತಾ ಸುಳ್ಯದಿಂದ ಸುಮಾರು 60 ಸಾವಿರ ಮತಗಳ ಗೆಲುವನ್ನು ನೀಡಬೇಕು. ಅಲ್ಲದೆ ನಾಮಪತ್ರ ಸಲ್ಲಿಕೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬೇಕು ಎಂದು ಹೇಳಿದರು. ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿ, ಪ್ರದೀಪ್ ರೈ ಮನವಳಿಕೆ ವಂದಿಸಿದರು. ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು. ಈ ಸಭೆಯಲ್ಲಿ ಪ್ರಮುಖರಾದ ಎ ವಿ ತೀರ್ಥರಾಮ , ಎಸ್ ಎನ್ ಮನ್ಮಥ , ವೆಂಕಟ್ ದಂಬೆಕೋಡಿ , ಸುಭೋದ್ ಶೆಟ್ಟಿ ಮೇನಾಲ, ಕೃಷ್ಣ ಶೆಟ್ಟಿ ಕಡಬ , ರಾಕೇಶ್ ರೈ ಕೆಡೆಂಜಿ , ಲತೀಶ್ ಗುಂಡ್ಯ , ಗುಣಾವತಿ ಕೊಲ್ಲಂತಡ್ಕ , ಪುಸ್ಪಾವತಿ ಬಾಳಿಲ , ಸತ್ಯವತಿ ಬಸವನಪಾದೆ , ಇಂದಿರಾ ಬಿ ಕೆ , ಆಶಾ ತಿಮ್ಮಪ್ಪ ಗೌಡ , ಸೇರಿದಂತೆ ನೂರಾರು ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.