ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ್ ಮನೆ ಬಳಿ ಮಾ.23 ರಂದು ನಕ್ಸಲರು ಪ್ರತ್ಯಕ್ಷವಾಗಿದ್ದರು. ಮನೆಯವರ ಬಳಿ ಏನು ಬಳಿ ನಕ್ಸಲರು ಏನೆಲ್ಲಾ ಮಾತನಾಡಿದ್ದಾರೆ, ಅವರ ಉದ್ದೇಶವೇನು ಎಂದು ಅಮರ ಸುದ್ದಿಗೆ ಅಶೋಕ್ ವಿವರಿಸಿದ್ದಾರೆ.
ಮನೆ ಬಳಿ ಬಂದ ನಕ್ಸಲರು ನಾವು ಯಾರು ಗೊತ್ತಾಯಿತಾ, ನಮಗೆ ಅರ್ಜೆಂಟ್ ಅಕ್ಕಿ, ದಿನಸಿ ಬೇಕು ಕೊಡಿ ಎಂದು ಕೇಳಿದ್ದಾರೆ. ಭಯದಿಂದ ಗೊತ್ತಾಯಿತು ಎಂದ ಮನೆಯವರು ಅಕ್ಕಿ, ಸಕ್ಕರೆ, ಚಾ ಹುಡಿ, ಉಪ್ಪು ಹಾಗೂ ನಾಲ್ವರಿಗೆ ಆಗುವಷ್ಟು ಊಟ ನೀಡಿದ್ದಾರೆ.
ಬಂದೂಕು ಬದಿಗಿಟ್ಟು ಮನೆಯವರ ಜತೆ ಮಾತು ಆರಂಭಿದಿದ್ದಾರೆ. ತುಳು ಹಾಗೂ ಕನ್ನಡ ಭಾಷೆ ಮಾತನಾಡಿದ್ದಾರೆ. ಬೇಗ ಹೋಗಬೇಕು ಅಲ್ಲದಿದ್ದರೇ ನಮ್ಮನ್ನು ಕವರ್ ಮಾಡ್ತಾರೆ ಎಂದು ಹೇಳಿದ್ದರಾದರೂ ಯಾರ ಭಯವಿಲ್ಲದಂತೆ ಅವರು ಸುಮಾರು ಒಂದು ಗಂಟೆಗಳ ಕಾಲ ಮನೆಯ ಬಳಿಯಿದ್ದು, ನಮ್ಮ ಟೀಮ್ ಇದೆ ಎಂದು ಹೇಳಿ ತೆರಳಿದ್ದಾರೆ. ನಿಮ್ಮ ಉದ್ದೇಶ ಏನು ಎಂದು ಮನೆಯವರು ಕೇಳಿದಾಗ ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಇದನ್ನು ಸರಿಪಡಿಸಬೇಕಾಗಿದೆ ಎಂದಿದ್ದಾರೆ. ಪೋಲೀಸರಿಗೆ ಗೊತ್ತಾಗಿ ಬಂದು ಕೇಳಿದರೇ ಹೇಳಿದ್ರು ಆಗಬಹುದು ಹೇಳದಿದ್ರು ಆಗಬಹುದು, ನಿಮಗೇನು ತೊಂದರೆ ಕೊಡಲ್ಲ ಎಂದು ಮನೆಯವರ ಜತೆ ನಡೆದ ಮಾತುಕತೆ ವೇಳೆ ಪ್ರಸ್ತಾಪವಾಗಿದೆ. ಆದರೇ ಮನೆಯ ಒಳಗೆ ಬರಲಿಲ್ಲ, ಮೊಬೈಲ್ ಚಾರ್ಜ್ ಇಡಲಿಲ್ಲ ಎಂದು ಆಶೋಕ್ ಅವರು ಅಮರ ಸುದ್ದಿಗೆ ತಿಳಿಸಿದ್ದಾರೆ.