
ಇತ್ತೀಚೆಗೆ ಕೊಲ್ಲಮೊಗ್ರದಲ್ಲಿ ಗೋಹತ್ಯೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿಂದೂ ಸಂಘಟನೆಗಳಿ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಪೋಲಿಸರು ಸ್ಥಳ ತನಿಖೆ ನಡೆಸಿ ತೆರಳಿದ್ದರು. ಘಟನೆ ಕೆಲ ತಿಂಗಳ ಹಿಂದೆ ನಡೆದಿದ್ದು ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂಬ ನೆಪವೊಡ್ಡಿ , ಸ್ಥಳೀಯರು ಕೇಸು ನೀಡಿದ್ದರೂ ಪ್ರಕರಣ ದಾಖಲಿಸದೇ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ.
ಇದೀಗ ಹಿಂದೂ ಸಂಘಟನೆಗಳು ಪೋಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲು ಸಜ್ಜಾಗಿವೆ ಎಂದು ತಿಳಿದುಬಂದಿದೆ. ಹಿಂದೂ ಸಂಘಟನೆಗಳಿರುವ ಭದ್ರಕೋಟೆಯಲ್ಲಿಯೇ ಗೋವಿಗೆ ನ್ಯಾಯ ಒದಗಿಸಲು ಆಗಿಲ್ಲ ಎಂಬುದು ಸಂಘಟನೆಗಳಿಗೆ ಇರಿಸುಮುರಿಸು ಉಂಟು ಮಾಡಿದೆ.
ವಿಡಿಯೋ ಸಾಕ್ಷಿ ಪೋಲೀಸರಿಗೆ ಸಾಕಾಗುವುದಿಲ್ಲವೇ, ಅದೆಷ್ಟೋ ಪ್ರಕರಣಗಳಲ್ಲಿ ವಿಡಿಯೋ ಆದರಿಸಿಯೇ ಕೇಸು ದಾಖಲಾಗುತ್ತದೆ. ಆರೋಪಿಗಳ ಪತ್ತೆ ಹಚ್ಚುತ್ತಾರೆ. ಸಿಸಿ ಕ್ಯಾಮರಾಗಳ ವಿಡಿಯೋ ದಾಖಲೆಗಳೇ ಹಲವು ಬಾರಿ ಪ್ರಮುಖ ಸಾಕ್ಷಿಯಾಗುತ್ತದೆ. ಸಿಸಿ ಕ್ಯಾಮರಾ ನೋಡಿ ವಾಹನ ಚಾಲಕರ ಮೇಲೆ ಕಾನೂನು ಪಾಲಿಸದವರ ದಂಡ ಹಾಕುವ ವ್ಯವಸ್ಥೆ ಇದೆ. ಆದರೇ ಈ ಪ್ರಕರಣಕ್ಕೆ ವಿಡಿಯೋ ಸಾಕ್ಷಿ ಸಾಕಾವುದಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.