ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ತಾಲೂಕು ಘಟಕ ಮತ್ತು ಅಮರ ಸುಳ್ಯ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾ.೨೯ರಂದು ಶುಭ ಶುಕ್ರವಾರದಂದು ಬೆಳಿಗ್ಗೆ ೧೦ ಗಂಟೆಗೆ ಸುಳ್ಯದ ಅಂಬಟೆಡ್ಕದಲ್ಲಿರುವ ಕನ್ನಡ ಭವನದಲ್ಲಿ ‘ಶಿಶಿಲ ಚಿಂತನೆ’ ಎಂಬ ಕೃತಿ ಬಿಡುಗಡೆಯಾಗಲಿದೆ, ಕರ್ನಾಟಕದ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲರಿಗೆ ಎಪ್ಪತ್ತು ವರ್ಷ ತುಂಬಿದ ಪ್ರಯುಕ್ತ ಅವರನ್ನು ಸಂದರ್ಶಿಸಿದ ಬದಿಯಡ್ಕ ಡಾ. ಶಂಕರ ಪಾಟಾಳಿ ಈ ಕೃತಿಯನ್ನು ರಚಿಸಿರುತ್ತಾರೆ. ನಮ್ಮ ದೇಶ ಮತ್ತು ರಾಜ್ಯವನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಕರಾರುವಾಕ್ಕಾದ ಉತ್ತರಗಳನ್ನು ಶಿಶಿಲರು ನೀಡಿದ್ದು, ಈ ಕೃತಿ ಶಿಶಿಲ ಸಪ್ತತಿಗೆ ಡಾ. ಪಾಟಾಳಿಯವರ ಕೊಡುಗೆಯಾಗಿರುತ್ತದೆ. ಕೃತಿಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಬಿಡುಗಡೆ ಮಾಡಲಿರುವರು. ಲಯನ್ ಎಂ. ಬಿ. ಸದಾಶಿವ ಮಾಜಿ ಲಯನ್ ಗವರ್ನರ್ ಪುಸ್ತಕ ಪರಿಚಯ ಮಾಡಿ ಕೊಡಲಿದ್ದಾರೆ. ಸಂದರ್ಶನಕಾರ ಡಾ. ಶಂಕರ ಪಾಟಾಳಿ, ಡಾ. ಪ್ರಭಾಕರ ಶಿಶಿಲಮತ್ತು ಶೈಲಿ ಪ್ರಭಾಕರ್ ಉಪಸ್ಥಿತರಿರುವರು. ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಶ್ರೀ ಚಂದ್ರಶೇಖರ ಪೇರಾಲು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಕಾರ್ಯಕ್ರಮದ ಬಳಿಕ ಸಹಭೋಜನದ ವ್ಯವಸ್ಥೆ ಇರುತ್ತದೆ ಎಂದು ಕೃತಿ ಲೋಕಾರ್ಪಣೆಗೆ ಎಲ್ಲರನ್ನು ಸ್ವಾಗತಿಸಿರುವ ತಾಲೂಕು ಕಸಾಪ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
- Sunday
- November 24th, 2024