ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಟಿಕೇಟ್ ವಂಚಿತರಾದ ಬಳಿಕ ಡಿವಿಎಸ್ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ಮಧ್ಯೆ ಕಾಂಗ್ರೆಸ್ ಕೂಡ ಟಿಕೇಟ್ ನೀಡುವ ಆಮಿಷ ತೋರಿಸಿ ಗಾಳ ಹಾಕಿತ್ತು. ರಾಜಕೀಯ ಹೊಂದಾಣಿಕೆ ಮಾಡಿಕೊಂಡ ಡಿವಿಎಸ್ ಪುತ್ತೂರಿನಲ್ಲಿ ತನ್ನ ಶಿಷ್ಯನಿಗೆ ಸೀಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಶಿಷ್ಯನ ಮುಖಾಂತರವೇ ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗಿದೆ. ಮಾಧ್ಯಮಗಳಲ್ಲಿ ಡಿವಿಎಸ್ ಕಾಂಗ್ರೆಸ್ ಗೆ ಹೋಗುತ್ತಾರೆಂದು ವರದಿ ಬಂದ ಬಳಿಕ ಬಿಜೆಪಿ ವರಿಷ್ಠರು ಡಿವಿಎಸ್ ಅವರಿಗೆ ರಾಜ್ಯಪಾಲ ಹುದ್ದೆ ಭರವಸೆ ನೀಡಿದೆ ಎನ್ನಲಾಗಿದೆ.
ಇದೀಗ ಡಿವಿಎಸ್ ಅತಂತ್ರ ಸ್ಥಿತಿಯಲ್ಲಿರುವಂತೆ ಕಂಡುಬರುತ್ತಿದ್ದ ಧೃಡ ನಿರ್ಧಾರ ಕೈಗೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಕಾಂಗ್ರೆಸ್ ಗೆ ಹೋಗಿ ಚುನಾವಣೆಯಲ್ಲಿ ಗೆದ್ದರೇ ಮಾತ್ರ ಬೆಲೆ, ಸೋತರೇ ಶೆಟ್ಟರ್ ಪರಿಸ್ಥಿತಿ ಬರಬಹುದು ಎಂಬ ಆಲೋಚನೆ ಗೌಡರಿಗಿದ್ದಂತಿದೆ. ತಟಸ್ಥವಾಗಿದ್ದರೇ ಉತ್ತಮ ಎಂಬ ಆಲೋಚನೆ ಇರಬಹುದೇನೋ, ಕೊನೆಗೆ ಬಿಜೆಪಿಯಲ್ಲಿಯೇ ಇದ್ದು ರಾಜ್ಯಪಾಲರ ಹುದ್ದೆಗೆ ಸಮಾಧಾನಪಡುತ್ತಾರೋ ಕಾದುನೋಡಬೇಕಿದೆ.
- Thursday
- November 21st, 2024