ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರು ಮತ್ತು ಅಧಿಕಾರಿಗಳ ಕರ್ತವ್ಯಗಳ ಕುರಿತಾಗಿ ಸಹಾಯಕ ಚುನಾವಣಾಧಿಕಾರಿಗಳಾದ ಡಾ.ಜಗದೀಶ್ ಕೆ ನಾಯ್ಕ ಸುಳ್ಯ ತಾಲೂಕು ಚುನಾವಣಾ ಕಛೇರಿಯಲ್ಲಿ ಮಾಹಿತಿ ನೀಡಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಳೆದ ಬಾರಿ ಜಿಲ್ಲೆಯಲ್ಲಿ 78% ಮತದಾನವಾಗಿದ್ದು ಈ ಭಾರಿ ಮತದಾನದ ಶೇಕಾಡವಾರು ಹೆಚ್ಚಿಸುವಂತೆ ಮತ್ತು ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೆವೆ ಎಂದು ತಿಳಿಸಿದರು.
ಗಡಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ
ಸುಳ್ಯ ತಾಲೂಕಿನ ಐದು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು ಈಗಾಗಲೇ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಅಲ್ಲದೇ ಕೇರಳ ಗಡಿಭಾಗವಾದ ಮುರೂರು , ಮಂಡೆಕೋಲು , ನಾರ್ಕೊಡು , ಸಂಪಾಜೆ , ಗುಂಡ್ಯ ಇಲ್ಲಿ ಇರಲಿದೆ ಅಲ್ಲದೆ ಮುರೂರು ಮತ್ತು ನಾರ್ಕೊಡು ಚೆಕ್ ಪೋಸ್ಟ್ ಗಳಲ್ಲಿ ಕೇರಳ ಮೂಲದ ಅಧಿಕಾರಿಗಳು ಕೂಡ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಆ್ಯಪ್ ಮತ್ತು ಟೋಲ್ ಫ್ರೀಗಳ ಕುರಿತ ವಿವರ
ನೂತನವಾಗಿ ಸೇರ್ಪಡೆ ಮತ್ತು ತಿದ್ದುಪಡಿ ಡಿಲೀಟ್ ಸೇರಿದಂತೆ ಎಲ್ಲವುಗಳು 24-03-24 ರ ವರೆಗೆ ತೆರೆದಿರುತ್ತದೆ ಅಲ್ಲದೇ ದೂರುಗಳು , ಮತಗಟ್ಟೆ , ಸೇರಿದಂತೆ ಇತರೆ ವಿಚಾರಗಳಿಗೆ ಆ್ಯಪ್ ಗಳನ್ನು ಸಿದ್ದಪಡಿಸಲಾಗಿದ್ದು ದೂರುಗಳು ಮತ್ತು ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1950 ಮತ್ತು ಸುಳ್ಯದ ಸಂಪರ್ಕಕ್ಕಾಗಿ 08257231231 ಸಂಪರ್ಕಿಸಬಹುದಾಗಿದೆ ಸಾರ್ವಜನಿಕರು ತಾಲೂಕು ಕಛೇರಿಯಲ್ಲಿ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಚುನಾವಣಾ ಅಧಿಕಾರಿಗಳು ನೀಡಿದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ವೀಕ್ಷಿಸಬಹುದಾಗಿದೆ.