ಅರಂತೋಡು ಗ್ರಾಮದ ಪಿಂಡಿಮನೆ ರೇಣುಕಾಪ್ರಸಾದ್ ಎಂಬವರ ಮನೆಯಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಮಾ.14ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಅಂದಾಜು ಸುಮಾರು 180 ಕೆಜಿಯಷ್ಟು ರಬ್ಬರ್ ಶೀಟ್ ಗಳು ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ.
ರಾತ್ರಿ ವೇಳೆ ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬಂದು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ಮನೆಯವರೆಲ್ಲಾ ಸೇರಿ ಬ್ಯಾರೆಲ್ ನಲ್ಲಿದ್ದ ನೀರನ್ನು ಬಕೆಟ್ ಮೂಲಕ ಸ್ಮೋಕ್ ಹೌಸ್ ಮೇಲೆ ಹಾಯಿಸಿದ ಕಾರಣ ಕೊಟ್ಟಿಗೆಗೆ ಬೆಂಕಿ ಹತ್ತಿಕೊಳ್ಳುವುದು ತಪ್ಪಿತು ಎಂದು ರೇಣುಕಾಪ್ರಸಾದ್ ಪತ್ರಿಕೆಗೆ ತಿಳಿಸಿದ್ದಾರೆ.