ಪುತ್ತೂರು : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9ರಂದು ವೈಭವದಿಂದ ನಡೆಯಿತು.
ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಹೆಬ್ಬಾರ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ ,ಶ್ರೀ ಮಹಾಗಣಪತಿ ಹೋಮ ನಡೆಯಿತು.
ಸಂಜೆ ದೈವಕ್ಕೆ ಎಣ್ಣೆ ವೀಳ್ಯ ಕೊಟ್ಟು ,ರಾತ್ರಿ ಶ್ರೀರಾಜಗುಳಿಗ ದೈವದ ನರ್ತನ ಸೇವೆ ನಡೆಯಿತು.
ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಪಾಲ್ತಾಡು ನಡುಮನೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ ,ಪೆರುವಾಜೆ ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ, ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ವಿನೋದಾ ರೈ ಚೆನ್ನಾವರ, ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ ಮಣಿಕ್ಕರ, ದೈವದ ಮಧ್ಯಸ್ಥ ದೀಕ್ಷಿತ್ ಜೈನ್ ಚೆನ್ನಾವರ ,ಶ್ರೀ ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷ ಪಿ.ಮಂಜಪ್ಪ ರೈ ,ಕಾರ್ಯಾಧ್ಯಕ್ಷ ದೇವರಾಜ ಆಳ್ವ, ಅಧ್ಯಕ್ಷ ಡಾ.ಹರಿಕೃಷ್ಣ ರೈ ಜಿ.ಎನ್.,ಉಪಾಧ್ಯಕ್ಷರಾದ ಸುಧಾಮ ಮಣಿಯಾಣಿ,ಸುಂದರ ನಾಯ್ಕ ನಾಗನಮಜಲು,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿಗಳಾದ ದಿನೇಶ್ ಶಾಂತಿಮೂಲೆ,ಶಶಿ ಕುಮಾರ್ ಬಿ.ಎನ್.,ಕೋಶಾಧಿಕಾರಿ ಬಾಬು ನಾಯ್ಕ ಶಾಂತಿಮೂಲೆ ಸೇರಿದಂತೆ ಸಮಿತಿಯ ಸದಸ್ಯರು ,ಭಕ್ತಾದಿಗಳು ಉಪಸ್ಥಿತರಿದ್ದರು.
ಹೊರರಾಜ್ಯದಿಂದಲೂ ಭಕ್ತರ ಆಗಮನ
ಶ್ರೀ ರಾಜಗುಳಿಗ ದೈವದ ನೇಮೋತ್ಸವದ ವೀಕ್ಷಣೆಗೆ ಹಿಮಾಲಯದ ತಪ್ಪಲಿನ ಡೆಹ್ರಾಡೂನ್,ಆಂದ್ರಪ್ರದೇಶದ ವಿಜಯವಾಡ,ಕರ್ನಾಟಕದ ರಾಯಚೂರು, ಚಿಕ್ಕಮಗಳೂರು ಭಾಗದಿಂದಲೂ ಭಕ್ತಾದಿಗಳು ಆಗಮಿಸಿದ್ದರು.
- Thursday
- November 21st, 2024