ಅಜ್ಜಾವರ ಗ್ರಾಮದ ಅಡ್ಪಂಗಾಯದಲ್ಲಿ ದ.ಕ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ರಾಜ್ಯ ವಲಯ ಯೋಜನೆಯಡಿ 27 ಲಕ್ಷದ 80 ಸಾವಿರದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ರವರು ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ವಹಿಸಿ ಮಾತನಾಡುತ್ತಾ ಸುಳ್ಯದ ಕಂದಾಯ ಮತ್ತು ಇತರೆ ವಿಚಾರಗಳ ಕುರಿತಾಗಿ ಸಚಿವರ ಗಮನಕ್ಕೆ ತಂದರು. ಅಲ್ಲದೇ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡಬೇಕು ಎಂದು ಹೇಳಿದರು. ಉದ್ಘಾಟನಾ ಮಾತುಗಳನ್ನಾಡುತ್ತಾ ಅಡ್ಪಂಗಾಯದಲ್ಲಿ ನೀಡಿದ ಮನವಿಗಳ ಬಗ್ಗೆ ಹೇಳುತ್ತಾ ಪಬ್ಲಿಕ್ ಸ್ಕೂಲ್ ರಚನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ತಿಳಿಸುತ್ತೆವೆ. ಅಲ್ಲದೆ ಊರಿನವರ ಸಹಕಾರ ನೀಡಿರುವುದು ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಗ್ರಾ.ಪಂ ಅಧ್ಯಕ್ಷರಾದ ಬೇಬಿ ಕಲ್ತಡ್ಕ , ಮಾಜಿ ಜಿ.ಪಂ.ಸದಸ್ಯ ಧನಂಜಯ ಅಡ್ಪಂಗಾಯ, ರಾಹುಲ್ ಅಡ್ಪಂಗಾಯ , ಲೀಲಾ ಮನಮೋಹನ್ , ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಇ , ಶೀತಲ್ , ಟಿ ಎಂ ಶಾಹಿದ್ , ಸದಾನಂದ ಮಾವಜಿ , ಹಸೈನಾರ್ ಹಾಜಿ ಗೋರಡ್ಕ , ಶಾಲಾ ಮುಖ್ಯ ಶಿಕ್ಷಕಿ ಧನಲಕ್ಷ್ಮಿ , ಅಶ್ರಫ್ ಸ ಅದಿ, ಅಬ್ಬಾಸ್ ಎ ಬಿ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಇಓ ರಮೇಶ್ ಬಿ ಇ ಸ್ವಾಗತಿಸಿ ಧನಲಕ್ಷ್ಮಿ ಕುದ್ಪಾಜೆ ಮುಖ್ಯ ಶಿಕ್ಷಕರು ವಂದಿಸಿ ಸುರೇಖ ರೈ ಡಿ ಸಹ ಶಿಕ್ಷಕರು ನಿರೂಪಿಸಿದರು.
- Thursday
- November 21st, 2024