
ಸುಳ್ಯದ ಕೊಯಿಂಗೋಡಿ ದಿ. ನಿವೃತ್ತ ಶಿಕ್ಷಕ ರವೀಂದ್ರನಾಥ ಕೊಯಿಂಗೋಡಿ ಮತ್ತು ನಿವೃತ್ತ ಶಿಕ್ಷಕಿ ಪ್ರೇಮಾರವರ ಪುತ್ರಿ ಶ್ರೀಮತಿ ರಶ್ಮಿ ಕೆ.ಆರ್.ರವರು ಮಂಡಿಸಿದ ‘Non-Newtonian Fluid Flow and Mass Transfer in an Annular Region’ ಎಂಬ ಪ್ರಬಂಧಕ್ಕೆ ( ವಿ.ಟಿ.ಯು) ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಳಗಾವಿಯ ಯುನಿವರ್ಸಿಟಿಯ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ವಿದ್ಯಾಶಂಕರ್‌ರಿಂದ ಮಾ. ೭ರಂದು ಡಾಕ್ಟರೇಟ್ ಪದವಿ ಸ್ವೀಕರಿಸಿದರು.
ಇವರಿಗೆ ಡಾ. ಇಂದಿರಾ ಆರ್.ರವರು ಮಾರ್ಗದರ್ಶನ ನೀಡಿದ್ದರು. ಪ್ರಸ್ತುತ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಸಕಲೇಶಪುರದ ಗೊದ್ದು ಯತಿರಾಜ್‌ರವರ ಪತ್ನಿ.