ಜೆಸಿಐ ಸುಳ್ಯ ಪಯಸ್ವಿನಿ ವಿವಿಧ ವಿಭಾಗದಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ನೀಡುವ ದೀ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು 8 ವರ್ಷ ಗಳಿಂದ ಕಲ್ಲುಗುಂಡಿ, ಸಂಪಾಜೆಯ ಪರಿಸರದ ಜನತೆಯ ಕರೆಗೆ ಸ್ಪಂದಿಸುತ್ತಾ ನಿಷ್ಟಾವಂತ ಸೇವೆಯನ್ನು ಸಲ್ಲಿಸುತ್ತಿರುವ ಸುಳ್ಯ ಮೆಸ್ಕಾಂ ಉಪವಿಭಾಗದ ಅರಂತೋಡು ಶಾಖೆ ಯಲ್ಲಿ ಪವರ್ ಮ್ಯಾನ್ ಸಂಗಮೇಶ್ ತಾಸಂಗಾವ ಇವರಿಗೆ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಭಾಂಗಣದಲ್ಲಿ ನೀಡಿ ಸನ್ಮಾನಿಸಲಾಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಸನ್ಮಾನವನ್ನು ನೆರವೇರಿಸಿದರು. ಜೇಸಿ ಅಶೋಕ್ ಚೂಂತಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ,ಮಾತಾಡಿದರು. ಜೆಸಿಐನ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು..
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ಜೇಸಿ ಗುರುಪ್ರಸಾದ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸಂಪಾಜೆಯ ಅಧ್ಯಕ್ಷರಾದ ಸುಮತಿ ಶಕ್ತಿವೇಲು , ಪತ್ರಕರ್ತ ಹೇಮಂತ್ ಸಂಪಾಜೆ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಸಂಗಮೇಶ್ ರವರು ಮಾತನಾಡಿ. ಇದರಿಂದ ನನ್ನ ಜವಾಬ್ಧಾರಿ ಇನ್ನಷ್ಟು. ಹೆಚ್ಚಾಗಿದೆ. ನಿಮ್ಮ ಪ್ರೀತಿಗೆ ಚಿರಋಣಿ ಎಂದರು. ವೇದಿಕೆಯಲ್ಲಿ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್, ಗ್ರಾ. ಪಂ ಉಪಾಧ್ಯಕ್ಷ ಎಸ್.ಕೆ. ಹನೀಫ್, ನಿರ್ದೇಶಕ ಪಿ.ಎನ್. ಗಂಗಾಧರ. ಮಹಾವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷರಾದ ಜಗದೀಶ್ ರೈ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷರಾದ ನವೀನ್ ಕುಮಾರ್. ಪ್ರಶಸ್ತಿ ಪತ್ರ ವಾಚಿಸಿದರು ಪ್ರಕಾಶ್ ಪಿ.ಎಸ್ ವಂದಿಸಿದರು. ಶಶ್ಮಿ ಭಟ್ ಎಲ್ಲರನ್ನೂ ವೇದಿಕೆಗೆ. ಆಹ್ವಾನಿಸಿದರು . ಜೇಸಿ ರಂಜಿತ್ ಕುಕ್ಕೆಟ್ಟಿ, ಜೇಸಿ ಅಭಿಷೇಕ್ ಗುತ್ತಿಗಾರು, ಅಶ್ವಿನಿ ಚೆಂಬು, ನಂದರಾಜ್ ಸಂಕೇಶ್, ಪಂಚಾಯತ್ ಸಿಬ್ಬಂದಿಗಳು. ನಾಗರಿಕರು ಉಪಸ್ಥಿತರಿದ್ದರು
- Friday
- November 1st, 2024