
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇವರು 2023 ಅಕ್ಟೋಬರ್ ನಲ್ಲಿ ನಡೆಸಿದ ಪೋಸ್ಟ್ ಗ್ರಾಜ್ಯುವೇಷನ್ ಸರ್ಟಿಫಿಕೇಟ್ ಇನ್ ನ್ಯೂಟ್ರಿಷಿಯನ್ ಆಂಡ್ ಡಯೆಟಿಕ್ಸ್ (PGCND)ಪರೀಕ್ಷೆಯಲ್ಲಿ ಮೋನಿಷಾ ಜಿ.ಎಸ್. ಗುಡ್ಡೆಮನೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ದೇವಚಳ್ಳ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿಯಾಗಿರುವ ಇವರು ಅಜ್ಜಾವರ ಗ್ರಾಮದ ಶಿರಾಜೆ ಗೋಪಾಲಗೌಡ ಮತ್ತು ತೇಜಸ್ವಿನಿ ದಂಪತಿಗಳ ಪುತ್ರಿ.