ಕೊಲ್ಲಮೊಗ್ರದ ಕೆ. ವಿ. ಜಿ. ಅನುದಾನಿತ ಪ್ರೌಢಶಾಲೆಯಲ್ಲಿ ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆಯ ವಿದ್ಯಾರ್ಥಿಗಳಿಗೆ, ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ಬೆಂಕಿ ಸಹಿತ ಹಾಗೂ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ ಜರುಗಿತು.
24 ಸ್ಕೌಟ್ ವಿದ್ಯಾರ್ಥಿಗಳು ಮತ್ತು 8 ಗೈಡ್ಸ್ ವಿದ್ಯಾರ್ಥಿಗಳು ಶುಚಿ ರುಚಿಯಾದ ಸುಮಾರು ಐವತ್ತಕ್ಕಿಂತಲೂ ಮೇಲ್ಪಟ್ಟು ವೈವಿಧ್ಯಮಯ ಅಡುಗೆ ಪಾಕಗಳನ್ನು ತಯಾರಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಕೆ ವಿ ಜಿ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಪಿ ಕೆ ಹಾಗೂ ಶಿಕ್ಷಕರುಗಳಾದ ಬಾಲಕೃಷ್ಣ ಗೌಡ, ಶ್ರೀಮತಿ ಸಂಧ್ಯಾರಾಣಿ, ಶ್ರೀಮತಿ ಜಯಶ್ರೀ, ರಾಜೇಶ್ , ಚಂದ್ರು, ಲೋಕನಾಥ ಗೌಡ, ಬಂಗ್ಲೆಗುಡ್ಡೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲ,ಲೇಡಿ ಸ್ಕೌಟ್ ಮಾಸ್ಟರ್ ರೇಷ್ಮಾ,ದಳ ನಾಯಕಿಯಾದ ವಿದ್ಯಾ, ಹಾಗೂ ಶಿಕ್ಷಕರುಗಳಾದ ರೋಹಿತಾಕ್ಷಿ,ಲೋಕೇಶ್,ಪರಶಿವ ಮೂರ್ತಿ,ಹರ್ಷಿತ, ಸೌಮ್ಯ ಹಾಗೂ ಕೆ ವಿ ಜಿ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಗಳಾದ ಲೀಲಾವತಿ ಶಾರದಾ, ವಿಶೇಷ ಆಹ್ವಾನಿತರಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಹಾಗೂ ವಸಂತ್ ಮತ್ತು ಆಶಿಶ್ ಉಪಸ್ಥಿತರಿದ್ದರು.
- Saturday
- November 23rd, 2024