Ad Widget

ಗುತ್ತಿಗಾರು : ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ


ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಹಾಗೂ ಅಮರ ಸೇನಾ ರಕ್ತದಾನಿಗಳ ತಂಡ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು, ಸರಕಾರಿ ಅರೋಗ್ಯ ಕೇಂದ್ರ ಗುತ್ತಿಗಾರು,ಹವ್ಯಕ ವಲಯ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು ಇವರ ಜಂಟಿ ಆಶ್ರಯ ದಲ್ಲಿ ಬೃಹತ್ ರಕ್ತ ದಾನ ಶಿಬಿರ 24/02/24ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಉದ್ಘಾಟನೆ ಮಾಡಿದರು, ದಿವ್ಯಾ ಹರೀಶ್ ಛತ್ರಪ್ಪಾಡಿ ಪ್ರಾರ್ಥನೆ ನೆರವೇರಿಸಿದರು,ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಜಿ. ಪಂ. ಮಾಜಿ ಸದಸ್ಯ ಭರತ್ ಮುಂಡೋಡಿ, ಗ್ರಾಮ. ಪಂಚಾಯತ್ ಸದಸ್ಯ, ವೆಂಕಟ್ ವಳಲಂಬೆ, ಲತಾ ಕುಮಾರಿ ಅಜಡ್ಕ, ವರ್ತಕರ ಸಂಘದ ಅಧ್ಯಕ್ಷ ಶಿವರಾಮ್ ಕರುವಾಜೆ, ರೆಡ್ ಕ್ರಾಸ್ ತಾಲೂಕು ಕೋಶಾಧಿಕಾರಿ ಗಣೇಶ್ ಭಟ್,ಕಾರ್ಯದರ್ಶಿ ತಿಪ್ಪೆಸಪ್ಪ,ಶ್ವೇತಾ, ತಾಲೂಕು ಕಾರ್ಯಕ್ರಮ ಸಂಯೋಜಕಿ, ಅ. ಸಂ. ಒಕ್ಕೂಟ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ,ಲಯನ್ಸ್ ಅಧ್ಯಕ್ಷ ಜಯರಾಮ್ ಕಡ್ಲಾರು,ಪೃಥ್ವಿರಾಜ್, ಶಿವಪ್ರಸಾದ್ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಸುಳ್ಯ,ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಕೋಶಾಧಿಕಾರಿ ಸುಕುಮಾರ್ ಕೋಡೊಂಬು ಉಪಸ್ಥಿತರಿದ್ದರು. ಕೊರೊನ ಸಂದರ್ಭದಲ್ಲಿ ಅತ್ಯುತ್ತಮ ಸೇವಾ ಕಾರ್ಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಸೇವಾ ಕಾರ್ಯ ನೆಲೆಯಲ್ಲಿ ಸರಕಾರಿ ಆಸ್ಪತ್ರೆ ಗುತ್ತಿಗಾರು ಇದರ ಪರವಾಗಿ ಡಾ. ನಿವೇದಿತಾ ಅವರನ್ನು ಗೌರವಿಸಲಾಯಿತು, ಹಾಗೂ ಅತ್ಯುತ್ತಮ ಸೇವಾಕಾರ್ಯ ನೆಲೆಯಲ್ಲಿ, ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಚಿಕ್ಮಲಿ, ಪ್ರೇಮ ಪೈಕ, ಮತ್ತು ಟ್ರಸ್ಟ್ ಸ್ಥಾಪನ ಸಂದರ್ಭದಿಂದಲೂ ನಿರಂತರ ಸ್ವಯಂ ಸೇವೆ, ಶಿಕ್ಷಕರಾಗಿ,ರಕ್ತದಾನ ವಿವಿಧ ಕ್ಷೇತ್ರಗಳ ಸೇವಾ ಕಾರ್ಯ ವಿಚಾರವಾಗಿ ಗಧಾದರ್ ಬಾಳುಗೋಡು ಅವರನ್ನು ಗೌರವಿಸಲಾಯಿತು. ಒಟ್ಟು 60 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮಾದರಿಯಾದರೂ.ಗ್ರಾಮ ಪಂಚಾಯತ್ ಮೇಲ್ವಿಚಾರಕಿ ಅಭಿಲಾಶ್ ಮೊನ್ಟ್ನೂರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!