Ad Widget

ನಕಲಿಗಳಿಂದ ಸುಳ್ಯ ಬಿಜೆಪಿಗೆ ನೈತಿಕತೆಯ ಪಾಠ ಅಗತ್ಯವಿಲ್ಲ ಲ- ಬಿಜೆಪಿ ಮಂಡಲ.

. . . . . . . . .

ರಾಜ್ಯದಲ್ಲಿ ಎಸ್ಸಿ,ಎಸ್‌ಟಿ ಸಮುದಾಯಕ್ಕೆ ಮೀಸಲಿರಿಸಿದ್ದ 11,000 ಕೋಟಿ ರೂಪಾಯಿ ಅನುದಾನವನ್ನು ಕಸಿದು ರಾಜ್ಯ ಸರಕಾರ ತನ್ನ ಬಿಟ್ಟಿಭಾಗ್ಯದ ಕೂಪಕ್ಕೆ ತುಂಬಿಸಿದೆ.ರಾಜ್ಯದ ಬಡವರು, ಶೋಷಿತರಿಗೆ ಮೀಸಲಿರಿಸಿದ ಹಣ ಲೂಟಿ ಮಾಡಿದ ಲಜ್ಜೆಗಟ್ಟ ಕಾಂಗ್ರೆಸ್ಸಿನ ಬಡವರ ಕಾಳಜಿಯ ಡಂಬಾಚಾರ ಬಯಲಾಗಿದೆ, ಮೊದಲು ನಿಮ್ಮ ಕಾಂಗ್ರೆಸ್ ನ ಬಡಾಯಿ ರಾಜ್ಯ ನಾಯಕರಿಗೆ ಬಡವರ ಕಾಳಜಿ, ಸಾಮಾಜಿಕ ಉದ್ದಾರದ ಪಾಠ ಮಾಡಿ , ಸುಳ್ಯ ಬಿಜೆಪಿಗೆ ನಿಮ್ಮಂತವರ ನೈತಿಕತೆ ಪಾಠ ಅಗತ್ಯವಿಲ್ಲ ಹೇಳಿದರಲ್ಲದೇ
ಕಾಂಗ್ರೆಸ್ ನೇತೃತ್ವದ ದಿಕ್ಕು ದೆಸೆ ಇಲ್ಲದ ರಾಜ್ಯ ಸರಕಾರದ ವ್ಯವಸ್ಥೆಯನ್ನು ಗಮನಿಸುವಾಗ ವಿರೋಧ ಪಕ್ಷದ ನಾಯಕನೇ ಬೇಕು ಅಂತ ಇಲ್ಲ ಬಿಜೆಪಿ ಶಾಸಕರಲ್ಲಿ ಒಬ್ಬೊಬ್ಬರೇ ಸಾಕು ಕಾಂಗ್ರೆಸಿಗರೇ ನಿಮ್ಮ ಹಳಿ ತಪ್ಪಿರುವ ಆಡಳಿತ ವ್ಯವಸ್ಥೆಯನ್ನು ತಿವಿಯಲು. ನಿಮ್ಮ ಕಾಂಗ್ರೆಸ್ ನಲ್ಲೇ ವಿರೋಧಿ ನಾಯಕರಿದ್ದಾರಲ್ಲ ಅವರೇ ನಿಮ್ಮ ಹುಳುಕು, ವೈಫಲ್ಯವನ್ನು ಸಾರ್ವಜನಿಕವಾಗಿ ಟಾಮ್ ಟಮ್ ಮಾಡ್ತಿದ್ದಾರಲ್ಲ ಮತ್ತೆ ಕಾಂಗ್ರೆಸಿಗರಿಗೆ ವಿರೋಧ ಪಕ್ಷದ ನಾಯಕನ ಉಸಾಬರಿ ಯಾಕೆ‌,…? ಪರ ವಿರೋಧ ನಿಮ್ಮಲ್ಲೇ ಇದೆಯಲ್ಲ ಕಾಂಗ್ರೆಸಿಗರೇ…
ನಕಲಿ ಮುಖವಾಡ ಹಾಕಿ ಇಷ್ಟು ವರ್ಷ ದೇಶವನ್ನು ಯಾಮಾರಿಸಿ , ರಾಜ್ಯದ ನಿಮ್ಮ ನಾಯಕರೇ ಹೇಳಿದಂತೆ ತಮ್ಮ 10 ತಲೆಮಾರಿಗಾಗುವಷ್ಟು ಮಾಡಿಟ್ಟುಕೊಂಡಿರುವ ಕಾಂಗ್ರೆಸ್ಸಿಗರಿಂದ ಮತ್ತು ಸುಳ್ಯದ ಕಾಂಗ್ರೆಸ್ಸಿನಿಂದ ಸುಳ್ಯ ಬಿಜೆಪಿಗೆ ನೈತಿಕ ಪಾಠ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿಲ್ಲ ಎಂದು ಸುಳ್ಯ ಮಂಡಲ ಬಿಜೆಪಿ ನಾಯಕರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading