Ad Widget

ಅರಂತೋಡು ಸಹಕಾರ ಸಂಘಕ್ಕೆ ಮೂಗುತಿಹಳ್ಳಿ ಮತ್ತು ಬೀಕನಹಳ್ಳಿ ಪ್ಯಾಕ್ಸ್ ಆಡಳಿತ ಮಂಡಳಿ ಸದಸ್ಯರ ಅಧ್ಯಯನ ಭೇಟಿ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೆ.7 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಆನಂದ ಸಿ. ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಚ್.ಎಮ್. ಹಾಗು ಬೀಕನಹಳ್ಳಿ ಪ್ಯಾಕ್ಸ್ ಅಧ್ಯಕ್ಷರಾದ ಸೋಮಶೇಖರಪ್ಪ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್‌ರವರು ಅಧ್ಯಯನ ಪ್ರವಾಸ ನಿಮಿತ್ತ ಭೇಟಿ ನೀಡದರು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಸಮೃದ್ಧಿ ಮಾರ್ಟ್, ಎಸ್.ಎಮ್.ಎಸ್. ಸರ್ವೀಸ್, ಗಣಕೀಕೃತ ಸಾಲದ ಅರ್ಜಿಗಳು, ಇ-ಸ್ಟಾಂಪ್, ಆಂಬ್ಯುಲೆನ್ಸ್  ಬಗ್ಗೆ ಮಾಹಿತಿಯನ್ನು ಪಡಕೊಂಡರು. ಸಂಘದ ವತಿಯಿಂದ ಮೂಗುತಿಹಳ್ಳಿ ಪ್ಯಾಕ್ಸ್ ಇದರ ಅಧ್ಯಕ್ಷರಾದ ಆನಂದ ಸಿ. ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಚ್.ಎಮ್. ಹಾಗು ಬೀಕನಹಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರಪ್ಪ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್‌ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ವಿಜೇತ್ ಮರುವಳ, ಸೋಮಯ್ಯ ಅಡ್ಯಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಅಟೋಮೇಷನ್ ಸಿಬ್ಬಂದಿ ದೀಕ್ಷಿತ್ ಮುಡಿಪು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading