ಕೊರೋನ ಮಹಮಾರಿಯ ರೋಗದಿಂದ ಜನತೆ ಜೀವನ ನಡೆಸಲು ತೊಂದರೆ ಪಡುತ್ತಿರುವ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಎರಿಸಿ ಟ್ಯಾಕ್ಸಿ ವಾಹನ ಗಳಿಂದ ಜೀವನ ನಡೆಸುವವರಿಗೆ ಕೊಡಲಿ ಎಟು ನೀಡಿದೆ ಎಂದು ಸುಳ್ಯ ಸಾಮಾಜಿಕ ಜಾಲತಾಣದ ಪ್ರಮುಖ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಇದರಿಂದ ಪ್ರಯಾಣ ವೆಚ್ಚ ದುಬಾರಿ ಯಾಗಿರುವುದರಿಂದ ಉದ್ಯೋಗ ಕ್ಕಾಗಿ ದಿನ ಓಡಾಡುವವರಿಗೆ ತುಂಬಾ ತೊಂದರೆಯಾಗಲಿದೆ.ಜನಸಾಮಾನ್ಯರನ್ನು ಕಡೆಗಣಿಸಿರುವ ಬಿಜೆಪಿ ಆಡಳಿತ ನಡೆಸಲು ವಿಫಲವಾಗಿದೆ. ಆಡಳಿತ ನಡೆಸಲು ಆಗದಿದ್ದರೇ ಪ್ರಧಾನಿ ರಾಜೀನಾಮೆ ನೀಡಲು ಆಗ್ರಹಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
- Friday
- November 22nd, 2024