ಗಾಂಧಿನಗರ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಕಮಿಟಿ ಮುಹಿಸ್ಸುನ್ನ : ಪಳ್ಳಿ ದರ್ಸ್ ಉದ್ಘಾಟನೆ ಪ್ರವಾದಿ ಮುಹಮ್ಮದ್ ಮುಸ್ತಫ (ಸ. ಅ ) ರವರ ಕಾಲದಿಂದಲೆ ಮದೀನಾ ಮಸ್ಜಿದ್ ನಲ್ಲಿ ಪ್ರಾರಂಭಗೊಂಡ ಪಳ್ಳಿದರ್ಸ್ ಧಾರ್ಮಿಕ ಆಧ್ಯಾತ್ಮಿಕ ಅಧ್ಯಯನ ಪರಂಪರೆ ಇಂದಿಗೂ ಹಚ್ಚ ಹಸುರಾಗಿ ಮುಂದುವರಿಯುತ್ತಿರುವುದು ದೀನಿನಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದುಕೇರಳದ ಮಲಪ್ಪುರo ನ ಖ್ಯಾತ ಧಾರ್ಮಿಕ ಪಂಡಿತ ರಾದ ಉಸ್ತಾದ್ ಹಸನ್ ಭಾಖವಿ ಪಲ್ಲಾರ್ ಹೇಳಿದರುಗಾಂಧಿನಗರ ಮಸ್ಜಿದ್ ನಲ್ಲಿ ಮಹಮ್ಮದ್ ಇರ್ಫಾನ್ ಸಖಾಫಿ ಅಲ್ ಹಿಕಮಿ ನೇತೃತ್ವದ ಈ ವರ್ಷದ ದರ್ಸ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರುಗಾಂಧಿನಗರ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ಅಧ್ಯಕ್ಷತೆ ವಹಿಸಿದ್ದರುಮುಖ್ಯಅತಿಥಿ ಗಳಾಗಿ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿ ಭಾಗವಹಿದ್ದರುಖತೀಬರಾದ ಆಶ್ರಫ್ ಖಾಮಿಲ್ ಸಖಾಫಿ ದುವಾ ಗೈದು ಉದ್ಘಾಟಿಸಿದರುಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಉಪಾಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಖಜಾoಚಿ, ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಕೆ. ಎಸ್. ಉಮ್ಮರ್, ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂ, ಮಾಜಿ ಅಧ್ಯಕ್ಷ ಆದo ಹಾಜಿ ಕಮ್ಮಾಡಿ, ಮಾಜಿ ನಿರ್ದೇಶಕ ಅಬ್ದುಲ್ ರೆಹಮಾನ್ ಹಾಜಿ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು
- Thursday
- November 21st, 2024