ಅಮರಪಡ್ನೂರು ಗ್ರಾಮದ ಚೂಂತಾರು ಎಂಬಲ್ಲಿ ಇಂದು ಮಧ್ಯಾಹ್ನ 12.00ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಿಡಿ ಉಂಟಾಗಿ ರಸ್ತೆ ಬೀದಿಯ ತರಗೆಲೆ ಮೇಲೆ ಬಿದ್ದು ರಸ್ತೆ ಬದಿಗೆ ಹಾಗೂ ಹತ್ತಿರದ ಖಾಸಗಿ ಜಮೀನಿಗೆ ವ್ಯಾಪಿಸುವ ಹಂತದಲ್ಲಿತ್ತು. ವಿಷಯ ತಿಳಿದ ಸ್ಥಳೀಯ ನಾಗರಿಕರು ಸೇರಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಯಶಸ್ವಿಯಾದರು.
ಮಾಹಿತಿ ತಿಳಿದು ತಕ್ಷಣ ಸ್ಪಂದಿಸಿ ಆಗಮಿಸಿದ ಸುಳ್ಯ ಅಗ್ನಿ ಶಾಮಕ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ಸಂಪೂರ್ಣ ಹತೊಟಿಗೆ ತಂದಿರುತ್ತಾರೆ ಎಂದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಅಮರಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.