Ad Widget

ಸುಬ್ರಹ್ಮಣ್ಯ: ಸಕಾಲದಲ್ಲಿ ಸ್ಪಂದಿಸಿ ಪ್ರಯಾಣಿಕರಿಗೆ ನೆರವಾದ ಸಾಮಾಜಿಕ ಕಾರ್ಯಕರ್ತ ಶ್ರೀಕುಮಾರ್

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶಿವರಾತ್ರಿಯ ದಿನ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದು, ಇದರ ಪರಿಣಾಮ ದೂರದೂರಿಗೆ ಹೋಗುವ ಭಕ್ತರಿಗೆ ಬಸ್ಸಿನ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿತ್ತು. ಇದರಿಂದಾಗಿ ಕೆಲಕಾಲ ಪ್ರಯಾಣಿಕರು ಪ್ರತಿಭಟನೆಗೆ ಇಳಿಯುವ ಪ್ರಸಂಗವೂ ನಡೆಯಿತು. ಇದನ್ನು ಮನಗಂಡ ಸುಬ್ರಹ್ಮಣ್ಯದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕುಮಾರ್ ಅವರು ಪೋನ್ ಕರೆಯ ಮೂಲಕ ಸಾರಿಗೆ ಸಚಿವರಾದ ಶ್ರೀರಾಮುಲು ಅವರನ್ನು ಸಂಪರ್ಕಿಸಿ ಅವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಸಚಿವ ಶ್ರೀ ರಾಮುಲು ಅವರು ಹೆಚ್ಚುವರಿ 25 ಬಸ್ಸು ಬಿಡುವಂತೆ ಆಯಾ ಡಿವಿಜನ್ ಗೆ ತಿಳಿಸಿ ಬಸ್ಸಿನ ವ್ಯವಸ್ಥೆ ಕಲ್ಪಿಸಿದರು. ಪ್ರಯಾಣಿಕರಿಗೆ ಎದುರಾದ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಸಚಿವ ಶ್ರೀರಾಮುಲು ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಕುಮಾರ್ ರವರಿಗೆ ಪ್ರಯಾಣಿಕರು ಧನ್ಯವಾದ ಸಲ್ಲಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading