Ad Widget

ಸುಳ್ಯ : ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಯುವಕರಿಬ್ಬರು ನೀರು ಪಾಲು

ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಈಶ್ವರಮಂಗಲದ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ದೊಡ್ಡೇರಿಯಲ್ಲಿ ನಡೆದಿದೆ.

. . . . .

ದೊಡ್ಡೇರಿಯಲ್ಲಿ ಇರುವ ಗೆಳೆಯರೊಬ್ಬರ ಮನೆಗೆ ಬಂದಿದ್ದ ಯುವಕರು ಪಕ್ಕದ ಪಯಸ್ವಿನಿ ಹೊಳೆಗೆ ಈಜಾಡಲು ತೆರಳಿದ್ದು ಈ ವೇಳೆ ಇಬ್ಬರು ಯುವಕರು ನೀರುಪಾಲಾದರೆಂದು ತಿಳಿದು ಬಂದಿದೆ. ಒರ್ವನನ್ನು ರಕ್ಷಿಸಲು ಹೋಗಿ ಮತ್ತೋರ್ವ ನೀರು ಪಾಲಾದರೆಂದೂ ತಿಳಿದುಬಂದಿದೆ. ಮೃತಪಟ್ಟ ಯುವಕರು ಜಿತೇಶ್ ಹಾಗೂ ಪ್ರವೀಣ್ ಎಂದು ತಿಳಿದುಬಂದಿದೆ.

ಸ್ಥಳೀಯರು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು. ಮೃತದೇಹಗಳನ್ನು ಸರಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!