Ad Widget

ವಳಲಂಬೆ : ಪ್ರತಿಭಾ ಪುರಸ್ಕಾರ

. . . . . . . . .

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ 74 ನೇ ಗಣರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವೀಶ್ ಕುಮಾರ್ ಮೊಟ್ಟೆಮನೆ ಧ್ವಜಾರೋಹಣ ನೆರವೇರಿಸಿದರು .ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ , ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಅಭಿಲಾಶಾ ಮೋಟ್ನೂರು, ಉಪಸ್ಥಿತರಿದ್ದು ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀಮತಿ ಶಶಿಕಲಾ ಪೈಕ , ಸುಧಾಕರ ಪಂಜಿಪಳ್ಳ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಮಿಳಾ ಪಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು . ನಂತರ ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು ಹಾಗೂ ಶ್ರೀಮತಿ ಮತ್ತು ಶ್ರೀ ವೆಂಕಟ್ ದಂಬೆಕೋಡಿ ಇವರು ಸ್ಥಾಪಿಸಿದ ದತ್ತಿನಿಧಿಯ ಬಹುಮಾನ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು .ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀಮತಿ ಮತ್ತು ಶ್ರೀ ಸುಧಾಕರ ಪಂಜಿಪಳ್ಳ ಇವರು ದಿವಂಗತರಾದ ತಮ್ಮ ತಂದೆ ತಾಯಿ ಶ್ರೀ ಲಿಂಗಪ್ಪ ಗೌಡ ಹಾಗೂ ಶ್ರೀಮತಿ ಜಾನಕಿ ಪಂಜಿಪಳ್ಳ ಇವರ ಸ್ಮರಣಾರ್ಥ ರೂ10,000 ದತ್ತಿನಿಧಿ ಹಾಗೂ ಶ್ರೀಮತಿ ಮತ್ತು ಶ್ರೀ ಸದಾನಂದ ಮೊಗ್ರ ಮೇಲೆ ಮನೆ ಪೈಕ ಇವರು ದಿವಂಗತರಾದ ತಮ್ಮ ತಂದೆ ಶ್ರೀ ಎನ್, ಎಸ್,ಮಾಧವ ಗೌಡ ಮೊಗ್ರ ಮೇಲೆ ಮನೆ ಪೈಕ ಇವರ ಸ್ಮರಣಾರ್ಥ ರೂ 5,000 ದತ್ತಿನಿಧಿ ಗಳನ್ನು ಸ್ಥಾಪಿಸಿದರು . ಸಭೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಮಿಳಾ ಪಿ, ಎಸ್ ಸ್ವಾಗತಿಸಿ, ಗೌರವ ಶಿಕ್ಷಕಿ ಶ್ರೀಮತಿ ತೇಜಾವತಿ ಡಿ. ವಿಜೇತರ ಪಟ್ಟಿ ವಾಚಿಸಿದರು .ಸಹ ಶಿಕ್ಷಕಿ ಶ್ರೀಮತಿ ಗೀತಾಲಕ್ಷೀ ಎ. ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಅತಿಥಿ ಶಿಕ್ಷಕಿ ಶ್ರೀಮತಿ ಅಕ್ಷತಾ ವಂದಿಸಿದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading