ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಡಿಕೆ ಕೃಷಿಗೆ ಭವಿಷ್ಯವಿಲ್ಲ ಎಂಬ ಆರಗ ಜ್ಞಾನೇಂದ್ರರವರ ಹೇಳಿಕೆಯನ್ನು ಖಂಡಿಸಿ ಡಿ. 30ರಂದು ಯೂತ್ ಕಾಂಗ್ರೇಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೂತ್ ಕಾಂಗ್ರೇಸ್ ಉಸ್ತುವಾರಿ ಅಭಿಷೇಕ್ ಬೆಳ್ಳಿಪಾಡಿ ಮಾತನಾಡಿ “ಜಿಲ್ಲೆ ಹಾಗೂ ರಾಜ್ಯದಲ್ಲಿ ಅಡಿಕೆ ಕೃಷಿಗೆ ಒಂದು ಗೌರವವಿದೆ. ಕೃಷಿಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳನ್ನು ನಾವೀಗ ಕಾಣಬಹುದು. ವಾಣಿಜ್ಯ ಉದ್ಯಮಕ್ಕೆ ಅಡಿಕೆ ಕೃಷಿ ಸಹಾಯಕವಾಗಿದೆ. ನಾವು ಪಕ್ಷದ ಕುರಿತು ಮಾತನಾಡುತ್ತಿಲ್ಲ ಬದಲಾಗಿ ಕೃಷಿಗೆ ಬೆಂಬಲವಾಗಿದ್ದೇವೆ. ಆರಗ ಜ್ಞಾನೇಂದ್ರ ಹೇಳಿದ ಮಾತಿಗೆ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ನಾವು ಇದನ್ನು ಖಂಡಿಸುತ್ತೇವೆ . ಅಲ್ಲದೇ ಅಡಿಕೆಗೆ ಭವಿಷ್ಯವಿದೆ, ಅಡಿಕೆ ಕೃಷಿಗೆ ಇನ್ನು ಬೆಲೆಯಿದೆ, ಅಡಿಕೆ ಕೃಷಿ ಇನ್ನು ಹೆಚ್ಚಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಕೆ ಮಾತನಾಡಿ, ಅಡಿಕೆ ಕೃಷಿಗೆ ಭವಿಷ್ಯವಿಲ್ಲವಾದಲ್ಲಿ ಕೃಷಿಗೆ ಪರ್ಯಾಯ ಪರಿಹಾರವನ್ನು ಒದಗಿಸಲಿ ಎಂದು ತಿಳಿಸಿದರು. ಯೂತ್ ಕಾಂಗ್ರೇಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾತನಾಡಿ ಹೊರಗಿನಿಂದ ದೇಶಕ್ಕೆ ಬರುವ ಅಡಿಕೆ ಆಮದನ್ನು ಮೊದಲು ನಿಲ್ಲಿಸಲಿ ಆಗ ಅಡಿಕೆಗೆ ಉತ್ತಮ ಬೆಲೆ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ.ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಉಬರಡ್ಕ ಗ್ರಾ. ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.
- Friday
- November 1st, 2024