Ad Widget

ಸುಳ್ಯ ಚರ್ಚ್‌ನಲ್ಲಿ ಕ್ರಿಸ್ತ ಜಯಂತಿ ಹಾಗೂ ಸೌಹಾರ್ದ ಕೂಟ


ಸೈಂಟ್ ಬ್ರಿಜಿಡ್ಸ್ ಚರ್ಚ್ ಸುಳ್ಯ ಹಾಗೂ ಕೆಥೋಲಿಕ್ ಸಭಾ ಘಟಕದ ವತಿಯಿಂದ ಕ್ರಿಸ್ತ ಜಯಂತಿ ಹಾಗೂ ಸೌಹಾರ್ದ ಕೂಟ ಕಾರ್ಯಕ್ರಮ ಡಿ.25ರಂದು ಸೈಂಟ್ ಬ್ರಿಜಿಡ್ಸ್ ಚರ್ಚ್ ಮುಂಭಾಗದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮ ಗುರುಗಳಾದ ರೆ.ಫಾ ವಿಕ್ಟರ್ ಡಿಸೋಜರವರು ಅಧ್ಯಕ್ಷತೆಯನ್ನು ವಹಿಸಿದರು. ಕೆಥೋಲಿಕ್ ಸಭಾ ಸುಳ್ಯ ಘಟಕದ ಅಧ್ಯಕ್ಷ ಜೊಸೆಫ್ ಅರುಣ್ ಕ್ರಾಸ್ತ ಪ್ರಸ್ತಾವಿಕ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಗೊಡ್ಪ್ರಿ ಮೊಂತೊರೊ, ನಾಗರಿಕ ಸಮಿತಿ ಬೀರಮಂಗಲ ಇದರ ಅಧ್ಯಕ್ಷ ಅಪ್ಪು ಮುತ್ತಪ್ಪ, ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ, ಪಾಲನ ಸಮಿತಿ ಕಾರ್ಯದರ್ಶಿ ಜೂಲಿಯಾನ, ಶರೀಫ್ ಜಟ್ಟಿಪಳ್ಳ, ಬ್ರದರ್ ಮೆಲ್ರೊಯ್ ಡಿಸಿಲ್ವ, ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ರಿಚರ್ಡ್ ಕ್ರಾಸ್ತ ಜಯನಗರ, ನವೀನ್ ಮಚಾದೋ, ಶರೀಫ್ ಜಟ್ಟಿಪಳ್ಳ, ಮಂಜುನಾಥ್ ಬಂಗ್ಲೆಗುಡ್ಡೆ, ಡೇವಿಡ್ ದೀರಾ ಕ್ರಾಸ್ತ, ಕು.ತುಳಸಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಲೆ ತೆಲಿಪಾಲೆ ಖ್ಯಾತಿಯ ಪ್ರವೀಣ್ ಮರ್ಕಮೆ ತಂಡದವರಿಂದ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಅಪೋಲಿನ್ ಡಿಸೋಜ, ಕವಿತಾ, ಸಿರಿಲ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading