ಕಷ್ಟಗಳ ಮೇಲೆ ಕಷ್ಟ ಎರಗಿ ಬಂದಾಗ ಅವರ ಕಷ್ಟಕ್ಕೆ ಹೆಗಲು ಕೊಟ್ಟವನ ಬಾಳಿಗೆ ಇಂದು ಕಷ್ಟವು ಬಂದೆರಗಿದೆ. ಕಷ್ಟ ಎಂದು ಹೇಳಿ ಬಂದ ಪ್ರತಿಯೊಬ್ಬರಿಗೂ ತನ್ನ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆ ಬಗ್ಗೆ ಸಹಾಯ ಹಸ್ತ, ನೆರವಿನ ಹಸ್ತ ಅನ್ನುವ ಪ್ರಕಟನೆ ಹಾಕುವ ಮುಖಾಂತರ ಮಾಹಿತಿಯನ್ನು ಹಂಚಿ ಹಲವಿಗೆ ದಾನಿಗಳ ಮೂಲಕ ನೆರವಾಗಿದ್ದಾರೆ.
ಅಷ್ಟೇ ಅಲ್ಲದೆ ವಿಶೇಷ ಭೂಷಣಗಳ ಮೂಲಕ ತನ್ನ ಬಳಗದ ಜೊತೆಯಾಗಿ ಅನೇಕ ಬಡರೋಗಿಗಳ ಪಾಲಿನ ದೇವರಾಗಿದ್ದ ಈ ಕಲಾ ಆರಾಧಕ. ತನ್ನ ಜೀವನದಲ್ಲಿ ಅನೇಕ ಅಡೆತಡೆಗಳಿದ್ದರೂ ಕಲೆಗೆ ಪ್ರೋತ್ಸಾಹ ಕೊಡುತ್ತಿದ್ದ ಮಹಾನ್ ವ್ಯಕ್ತಿತ್ವ ನಾಗೇಶ್ ಬೆಳ್ಳಾರೆಯವರದ್ದು. ಕಲಾತ್ಮಕ ಜಗತ್ತು ಅನ್ನೋ ವೇದಿಕೆಯ ಮುಖಾಂತರ ಹಲವಾರು ಪ್ರತಿಭೆಗಳಿಗೆ ಅವಕಾಶಗಳನ್ನು ಸೃಷ್ಟಿಸಿದ ಮಹಾ ಕಲಾ ಪೋಷಕ.
ನಾಗೇಶ್ ಬೆಳ್ಳಾರೆಯವರು ಇತ್ತೀಚೆಗೆ ಬೈಕ್ ಅಪಘಾತದಲ್ಲಿ ತೀವ್ರ ಗಾಯಗಳಾಗಿದ್ದು ಕೈಯ ನರದ ತೊಂದರೆಯಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲಾರ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚಕ್ಕೆ ಇನ್ನೂ ಸುಮಾರು 2 ಲಕ್ಷಕ್ಕೂ ಅಧಿಕ ಮೊತ್ತದ ಅವಶ್ಯಕತೆಯಿದೆ. ಪರೋಪಕಾರಿಯಾಗಿದ್ದ ನಾಗೇಶ್ ಕುಟುಂಬವು ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಕಷ್ಟಪಡುತ್ತಿದ್ದಾರೆ. ನೆರವಿನ ಹಸ್ತ ಚಾಚುವ ಮುಖಾಂತರ ನೂರಾರು ಕುಟುಂಬಗಳಿಗೆ ಬೆಳಕಾಗಿದ್ದ ಬೆಳ್ಳಾರೆಯ ಯುವಕನಿಗೆ ನಿಮ್ಮ ನೆರವಿನ ಹಸ್ತ ಚಾಚುವಿರೆಂಬ ಪುಟ್ಟ ಭರವಸೆ ನೊಂದ ಕುಟುಂಬದ ಕಣ್ಣಲ್ಲಿದೆ.
ನೆರವು ನೀಡಲು ಇಚ್ಚಿಸುವ ದಾನಿಗಳು ಈ ಕೆಳಗಿನ ಖಾತೆಗೆ ತಮ್ಮ ಕೈಲಾದಷ್ಟು ಧನ ಸಹಾಯವನ್ನು ಮಾಡಬಹುದು.
Union Bank
Branch: Bellare
IFSC Code: UBIN0918920
Account No: 520101265811215
Google pay 7899495364
- Wednesday
- December 4th, 2024