ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನ ರಾಷ್ಟ್ರೀಯ ಅಧಿವೇಶನ ಹರಿಯಾಣದ ಕುರುಕ್ಷೇತ್ರದಲ್ಲಿ ಡಿ 26ರಂದು ನಡೆಯಲಿದ್ದು, ಸುಳ್ಯದಿಂದ ಮೂವರು ನ್ಯಾಯವಾದಿಗಳು ಭಾಗವಹಿಸಲು ತೆರಳಿರುತ್ತಾರೆ. ಡಿ.26 ರಂದು ಅಪರಾಹ್ನ 3.00 ಗಂಟೆಗೆ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಯಾಗಿರುವ ಜಸ್ಟೀಸ್ ಸೂರ್ಯಕಾಂತ್ ರವರು ಉದ್ಘಾಟಿಸಲ್ಲಿದ್ದಾರೆ. ಸುಳ್ಯದಿಂದ ಯುವ ನ್ಯಾಯವಾದಿ, ಸಿ.ಎ.ಬ್ಯಾಂಕ್ ನಿರ್ದೇಶಕ ಹರೀಶ್ ಬೂಡುಪನ್ನೆ, ದ.ಕ.ಜಿಲ್ಲಾ ಅಧಿವಕ್ತಾ ಪರಿಷತ್ ನ ಉಪಾಧ್ಯಕ್ಷ, ನ್ಯಾಯವಾದಿ ಜಗದೀಶ್ ಡಿ.ಪಿ., ನ್ಯಾಯವಾದಿ ಸಂದೀಪ್ ವಳಲಂಬೆ ಭಾಗವಹಿಸಲು ತೆರಳಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 28 ನ್ಯಾಯವಾದಿಗಳು ಭಾಗವಹಿಸಲಿದ್ದಾರೆ.
- Wednesday
- December 4th, 2024