ವಿದ್ಯಾರ್ಥಿಗಳಿಗೆ ವ್ಯಾಪಾರದ ಮೂಲಕ ಗಣಿತದ ಕಲಿಕೆಯೂ ನಡೆಯುತ್ತದೆ ಎಂಬುದನ್ನು ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಗಣಿತ ದಿನದ ಅಂಗವಾಗಿ ನಡೆದ ಮೆಟ್ರಿಕ್ ಮೇಳದಲ್ಲಿ ಗಣಿತ ಶಿಕ್ಷಕಿ ಸವಿತಾಕುಮಾರಿ ಅವರು ಕಲಿಸಿಕೊಟ್ಟಿದ್ದಾರೆ. ಬೆಳಿಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಮೆಟ್ರಿಕ್ ಮೇಳಕ್ಕೆ ಪೂರಕ ತಯಾರಿಯಲ್ಲಿ ತೊಡಗಿಸಿಕೊಂಡರು. ಬಳಿಕ ೧೦ಗಂಟೆಯಿಂದ ಆರಂಭವಾದ ಮೆಟ್ರಿಕ್‌ಮೇಳದಲ್ಲಿ ವಿದ್ಯಾರ್ಥಿಗಳು ತರಕಾರಿ, ತೆಂಗಿನಕಾಯಿ, ತಂಪುಪಾನಿಯಗಳು, ಮಸಾಲೆಪುರಿ, ಪಾನ್‌ಪುರಿ, ಐಸ್‌ಕ್ರೀಂ ಉತ್ಪನ್ನಗಳು, ಹಣ್ಣು-ಹಂಪಲುಗಳು, ಸಮೋಸ ಮತ್ತು ಇತರ ವಿಶಿಷ್ಟ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಟ್ಟು, ವ್ಯಾಪಾರ ನಡೆಸಿದರು. ಮೇಳದಲ್ಲಿ ೫೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿ, ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಗಳು ಒಂದು ಸಾವಿರಕ್ಕಿಂತ ಅಧಿಕ ವ್ಯಾಪಾರದ ಮೂಲಕ ಹಣಗಳಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮೇಳದಲ್ಲಿ ಬಾಗವಹಿಸಿ, ತಿಂಡಿ-ತಿನಿಸುಗಳನ್ನು ವಿದ್ಯಾರ್ಥಿಗಳಿಂದ ವ್ಯಾಪಾರದ ಮೂಲಕ ತೆಗೆದುಕೊಂಡು ಸವಿದರು.
ಮೆಟ್ರಿಕ್ ಮೇಳಕ್ಕೆ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಚಾಲನೆ ನೀಡಿದರು. ಶಿಕ್ಷಕರಾದ ಜಯಲತಾ ಕೆ.ಆರ್., ಮೀನಕುಮಾರಿ.ಕೆ, ಶಿವಪ್ರಕಾಶ.ಕೆ, ಶಿವಪ್ರಸಾದ.ಕೆ, ಕುಮಾರ್ ಲಮಾಣಿ, ಸಿಬ್ಬಂದಿ ಬೇಬಿ.ಕೆ ಹಾಗೂ ೧೦೦ಕ್ಕಿಂತ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಮೇಳದ ನೇತೃತ್ವವನ್ನು ಗಣಿತ ಶಿಕ್ಷಕಿ ಸವಿತಾಕುಮಾರಿ ವಹಿಸಿದರು.
- Thursday
- November 21st, 2024