Ad Widget

ಕೆ.ವಿ.ಜಿ ಪಾಲಿಟೆಕ್ನಿಕ್: ವಿದ್ಯಾರ್ಥಿ ಸಂಘ ಉದ್ಘಾಟನೆ


ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್‌ನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್‌ಕುಮಾರ್ ಎನ್.ಪಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿ ಸಂಘದ ಅದ್ಯಕ್ಷರಾಗಿ ಅಪೇಕ್ಷ್ ಎಂ.ಪಿ (ಅಂತಿಮ ಸಿವಿಲ್), ಉಪಾಧ್ಯಕ್ಷರಾಗಿ ಪುಷ್ಪರಾಜ್ (ಅಂತಿಮ ಮೆಕ್ಯಾನಿಕಲ್), ಕಾರ್ಯದರ್ಶಿಯಾಗಿರಾಜೇಶ್ ಪಿ.ಎಂ (ಪ್ರಥಮ ಸಿವಿಲ್), ಜತೆ ಕಾರ್ಯದರ್ಶಿಯಾಗಿ ಕು.ಸೃಷ್ಟಿ (ಪ್ರಥಮಇಲೆಕ್ಟಿçಕಲ್), ಕೋಶಾಧಿಕಾರಿಯಾಗಿ ಪಿ.ಶ್ರೀಕಾಂತ್ ರೆಡ್ಡಿ(ಅಂತಿಮ ಸಿವಿಲ್), ಜತೆ ಕೋಶಾಧಿಕಾರಿಯಾಗಿ ಚರಣ್‌ರಾಜ್ (ಪ್ರಥಮ ಸಿವಿಲ್), ಕ್ರೀಡಾ ಕಾರ್ಯದರ್ಶಿಯಾಗಿ ಲಿಖಿತ್ ಎಸ್.ಆರ್ (ದ್ವಿತೀಯ ಅಟೊಮೊಬೈಲ್), ಜತೆಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಎ.ಆರ್(ಅಂತಿಮ ಸಿವಿಲ್), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಜ್ವಲ್ ಬಿ(ದ್ವಿತೀಯ ಅಟೊಮೊಬೈಲ್) ಮತ್ತು ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು. ಶ್ರೀಕಲಾ (ಅಂತಿಮ ಕಂಪ್ಯೂಟರ್ ಸೈನ್ಸ್) ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದ ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಸಹ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರಮೋದ್ ಬಿ.ಡಿ. ಲೆಕ್ಕ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಅಕ್ಷಯ್‌ಕುಮಾರ್ ಬಿ.ಎಸ್ ಸ್ವಾಗತಿಸಿ ಅಪೇಕ್ಷ್ ವಂದಿಸಿದರು.ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!