ಡಿ.22 ರಿಂದ ಡಿ.30 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ “ಅಸ್ಮಿತೆ” ಸರಸ್ ಮೇಳದ ಲೈವ್ ಫುಡ್ ಫೆಸ್ಟ್ ನಲ್ಲಿ ಭಾಗವಹಿಸುತ್ತಿರುವ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ದೀಪ ಸಂಜೀವಿನಿ ಸಂಘದ ಸದಸ್ಯೆಯರಾದ ಶಾರದಾ ನಡುಗಲ್ಲು, ಇಂದಿರಾ ಬಾಳುಗೋಡು, ಸೆಲಿನ್ ಸೆಬಾಸ್ಟಿನ್, ರಮ್ಯ ಉಜಿರಡ್ಕ, ಚೈತನ್ಯ ಇವರುಗಳನ್ನು ಡಿ.20 ರಂದು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಒಕ್ಕೂಟದ ವತಿಯಿಂದ ಬೀಳ್ಕೊಡಲಾಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯಕ್ರಮ ಸಂಯೋಜಕಿ ಶ್ವೇತಾ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯರಾದ ಲತಾ ಅಜಡ್ಕ, ಎಂ.ಬಿ.ಕೆ ಮಿತ್ರಾಕುಮಾರಿ ಚಿಕ್ಮುಳಿ, ಎಲ್.ಸಿ.ಆರ್.ಪಿ ದಿವ್ಯ ಚತ್ರಪ್ಪಾಡಿ, ಸವಿತಾ ಕುಳ್ಳಂಪಾಡಿ, ಗೀತಾ ವಳಲಂಬೆ, ಗ್ರಂಥಪಾಲಕಿ ಅಭಿಲಾಷಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮರ ಸಂಜೀವಿನಿ ಗುತ್ತಿಗಾರು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಅವರು “ಸುಳ್ಯ ತಾಲೂಕಿನಿಂದ ಭಾಗವಹಿಸುತ್ತಿರುವ ಏಕೈಕ ತಂಡ ಇದಾಗಿದ್ದು, ಕಳೆದ ಬಾರಿ ರಾಷ್ಟ್ರ ಮಟ್ಟದ ಫುಡ್ ಫೆಸ್ಟ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಅಮರ ಸಂಜೀವಿನಿ ಒಕ್ಕೂಟದ ಸಿದ್ದಿಧಾತ್ರಿ ತಂಡದ ಸ್ಪೂರ್ತಿ ಈ ಬಾರಿ ರಾಜ್ಯ ಮಟ್ಟದಲ್ಲಿ ನಡೆಯುವ ಸರಸ್ ಮೇಳದಲ್ಲಿ ದೀಪ ಸಂಜೀವಿನಿ ತಂಡ ಭಾಗವಹಿಸುವಂತೆ ಮಾಡಿದೆ. ಮಹಿಳೆಯರನ್ನು ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವಲ್ಲಿ ಸಂಜೀವಿನಿಯು ಪ್ರೇರಣೆಯಾಗಿದೆ ಅನುಭವದಿಂದ ಕಲಿಯುವ ಪಾಠ ಹಾಗೂ ಸೃಜನಶೀಲ ಚಟುವಟಿಕೆಗಳ ವೀಕ್ಷಣೆ ನಮ್ಮೂರಿನ ಮಹಿಳೆಯರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಸರಸ್ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಮಟ್ಟದ ಸರಸ್ ಮೇಳದಲ್ಲಿ ದೀಪ ಸಂಜೀವಿನಿ ಸಂಘದ ಸದಸ್ಯೆಯರು ಭಾಗಿಯಾಗಲಿದ್ದಾರೆ” ಎಂದು ಹೇಳಿದರು.
(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- December 4th, 2024