ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಅವರನ್ನು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿ ನನ್ನ ಮೇಲೆ ದೂರು ಸುಳ್ಳು ದೂರು ದಾಖಲಾಗಿದೆ, ಈ ಬಗ್ಗೆ ದೂರು ನೀಡಿದವರೂ ಮಾಧ್ಯಮಕ್ಕೆ ಸ್ಪಷ್ಟನೆ ನೀಡಬೇಕೆಂದು ನವೀನ್ ರೈ ತಂಬಿನಮಕ್ಕಿ ಅಮರ ಸುದ್ದಿಗೆ ತಿಳಿಸಿದ್ದಾರೆ.
ಬೆಳ್ಳಾರೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಾದ ವಿಷಯ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಆದರೆ ಈ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಇವರ ಯಾವುದೇ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರುವುದಿಲ್ಲ. ಆದರೂ ವಿನಾಕಾರಣ ನನ್ನ ಮೇಲೆ ದೂರು ನೀಡಿರುವ ನೀರಜಾಕ್ಷಿ ಮಾಧವ ಗೌಡ ರವರು ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಲಿ ಎಂದು ಒತ್ತಾಯಿಸಿದ್ದಾರೆ.
- Friday
- November 1st, 2024