ನಮ್ಮ ಹಿರಿಯರ ಆಚಾರ ವಿಚಾರಗಳು, ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕಾಗಿದೆ ಡಾ. ರೇಣುಕಾ ಪ್ರಸಾದ್ ಕೆ.ವಿ ನಮ್ಮ ಹಿರಿಯರ ಆಚಾರ ವಿಚಾರಗಳು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕಾಗಿದೆ. ಅವರು ಬಾಳಿ ಬದುಕಿದ ಕುಟುಂಬ ಪರಂಪರೆ, ಹಿರಿಯರ ಜೀವನ ಪದ್ದತಿ ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಸುವ ಕೆಲಸ ನಮ್ಮಿಂದಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಅಭಿಪ್ರಾಯ ಪಟ್ಟರು. ಅವರು ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಡಿ.18ರಂದು ನಡೆದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡುತ್ತಿದ್ದರು.
ನಮ್ಮ ಕುಟುಂಬದ ಮೂಲಸ್ಥಾನದಲ್ಲಿ ನಡೆಯುವ ದೈವ, ದೇವರುಗಳ ಕಾರ್ಯಕ್ಕೆ ನಮ್ಮ ಮನೆಯ ಮಕ್ಕಳು ಭಾಗವಹಿಸುವಂತೆ ಮತ್ತು ಅವರು ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ. ನಮ್ಮ ಮಕ್ಕಳ ಭವಿಷ್ಯವನ್ನು ಅತ್ಯಂತ ಜಾಗರೂಕರಾಗಿ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ.ನಾವು ಬೆಳೆಯುವುದರೊಂದಿಗೆ ಸಮಾಜವನ್ನು ಸಹಾ ಬೆಳೆಸಿ ನಮ್ಮ ಜನಾಂಗದಬಂಧುಗಳನ್ನು ಮುಖ್ಯ ವಾಹಿನಿಗೆ ತರಬೇಕಾದ ಕಾರ್ಯಗಳು ಇನ್ನಷ್ಟು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು ಮತ್ತು ಸಂಘಟನೆಗಳು ಸ್ವಾಸ್ಥö್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಕಾರ್ಯ ಪ್ರವರ್ತರಾಗಬೇಕಾಗಿ ಆಶಿಸುತ್ತೇನೆ. ವಿಟ್ಟ ಒಕ್ಕಲಿಗರ ಸಂಘದ ಎಲ್ಲಾ ಸದಸ್ಯರುಗಳು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಪ್ರಶಂಸನೀಯವಾದುದು. ಈ ಸಂಘಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. ಈ ಕಾರ್ಯಕ್ರಮವನ್ನು ಸಂಘಟಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತಾ ಸಮಾರಂಭಕ್ಕೆ ಶುಭಹಾರೈಸಿದರು.
ಸಮಾರಂಭ ಅಧ್ಯಕ್ಷತೆಯನ್ನು ಮೋನಪ್ಪ ಗೌಡ ಶಿವಾಜಿನಗರ ವಹಿಸಿದ್ದರು. ವೇದಿಕೆಯಲ್ಲಿ ಲೋಕಯ್ಯ ಗೌಡ ಮಂಗಳೂರು ಮತ್ತು ಮೋಹನ್ ಕಾಯರ್‌ಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
- Friday
- November 1st, 2024