ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆ ವಾರ್ಷಿಕೋತ್ಸವ ಸಮಾರಂಭ ಮತ್ತು ಪೋಷಕರ ಸಮ್ಮಿಲನವು ದಿನಾಂಕ 15.12.2012ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಯು ಬಿ ಚಕ್ರಪಾಣಿರವರು ದ್ವಜಾರೋಹಣಗೈದರು. ನೂಜಿಬೈಲು ಮೇಜರ್ ವೆಂಕಟ್ರಾಮಯ್ಯ ಫೌಂಡೇಶನ್ ಉದಾರ ಕೊಡುಗೆ ನೀಡಿದ ನವೀಕೃತ ಕ್ರೀಡಾ ಕಟ್ಟಡದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಎ ಕುಸುಮ ಯೋಗೇಶ್ವರ್ ನೆರವೇರಿಸಿ, ಶುಭಹಾರೈಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಐತಪ್ಪ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಮಾಲತಿ ಕೆ. ವರದಿ ವಾಚಿಸಿದರು. ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪುಟ್ಟರಾಜು ಮತ್ತು ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮಂಜುನಾಥ ಹೆಚ್ ಟಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲೂ ಸಂಸ್ಥೆಯ ವಿದ್ಯಾರ್ಥಿಗಳ ಕಾರ್ಯಸಾಧನೆಗಳನ್ನು, ಶಿಕ್ಷಕ ವೃಂದದ ಕಠಿಣ ಪರಿಶ್ರಮಗಳನ್ನು ಮತ್ತು ಸಂಸ್ಥೆಯ ಮೂಲಭೂತ ಸೌಕರ್ಯಗಳು, ಸುಸಜ್ಜಿತ ಕೊಠಡಿಗಳು, ಸೌಲಭ್ಯಗಳು ಮತ್ತು ಕಲಿಕೆಗೆ ಪೂರಕವಾದ ಸುಂದರ ವಾತಾವರಣವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಜಿ ರಾಜಾರಾಮ ರವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ಎಂ ಶಂಕರನಾರಾಯಣ ಭಟ್ ರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಯ ಕನಸನ್ನು ಹೊಂದಿ ಸಂಸ್ಥೆಯಲ್ಲಿ ಮುಂದಿನ ವರ್ಷದಿಂದ ಅನುಷ್ಠಾನಗೊಳಿಸಲಾಗುವ ಕೌಶಲ್ಯ ತರಬೇತಿಗಳ ಬಗ್ಗೆ ಸಂಸ್ಥೆಯ ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಶ್ರೀ ಜಯರಾಮ ಕೆ ಎಸ್ ರವರು ಮಾಹಿತಿ ನೀಡಿದರು. ಕಲಿಕೆ, ಕಲಾ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ಹುಲ್ಲುಬೆಂಕಿ, ಲಯನ್ಸ್ ಕ್ಲಬ್ ಸಂಪಾಜೆ ಅದ್ಯಕ್ಷರಾದ ಶ್ರೀಮತಿ ನಳಿನಿ ಕಿಶೋರ್ ಕುಮಾರ್ ಪಿ. ಬಿ. ಭಾಗವಹಿಸಿದರು. , ಖಜಾಂಜಿ ಶ್ರೀ ಬಿ ಆರ್ ಪದ್ಮಯ್ಯ, ಹಿರಿಯ ನಿರ್ದೇಶಕರಾದ ಶ್ರೀ ನಾರಾಯಣ ಭಟ್ ಕೆ ಎಸ್, ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾದ ಶ್ರೀ ಕೆ ಜಿ ಮುರಳೀಧರ್, ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ಪಿ, ಶ್ರೀ ಡಾ| ಜಯರಾಮ ಯು ಪಿ, ನಿರ್ದೇಶಕರಾದ ಶ್ರೀ ಮಹಮ್ಮದ್ ಹನೀಫ ಎಸ್ ಕೆ, ಶ್ರೀ ಕಾರ್ಯಪ್ಪ ಎಚ್ ಎನ್, ಶ್ರೀ ಸ್ವಾದಿಕ್ ಎಸ್ ಎ, ಶ್ರೀ ರಾಮಕೃಷ್ಣ ಕೆ ಬಿ ಉಪಸ್ಥಿತರಿದ್ದರು. ಪ್ರೌಡಶಾಲಾ ಶಿಕ್ಷಕರಾದ ಶ್ರೀ ಕುಮಾರ ಹೆಚ್ ಜಿ ಕಾರ್ಯಕ್ರಮ ನಿರೂಪಿಸಿ, ಕಾಲೇಜು ಉಪನ್ಯಾಸಕರಾದ ಶ್ರೀ ಲೋಕ್ಯಾನಾಯ್ಕ ವಂದಿಸಿದರು. ನಂತರ ಪೋಷಕರ ಸಮ್ಮಿಲನ ಮತ್ತು ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
- Wednesday
- December 4th, 2024