Ad Widget

ಗುತ್ತಿಗಾರು :- ಗ್ರಂಥಾಲಯದಲ್ಲಿ ಚಿಣ್ಣರ ಚಿತ್ತಾರ ಅಭಿಯಾನ

. . . . . .

ಕರ್ನಾಟಕ ಸರ್ಕಾರ ಆಯುಕ್ತಾಲಯದ ನಿರ್ದೇಶನದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಡಿ.01 ರಿಂದ ಡಿ.15 ರವರೆಗೆ ಚಿಣ್ಣರ ಚಿತ್ತಾರ ಅಭಿಯಾನ ಕಾರ್ಯಕ್ರಮ ನಡೆಯಿತು.
ಪ್ರಾರಂಭದಲ್ಲಿ ಅಂಗನವಾಡಿ ಕೇಂದ್ರಗಳಾದ ವಳಲಂಬೆ ಮತ್ತು ಕಮಿಲ ಇಲ್ಲಿನ ಪುಟಾಣಿಗಳು ಮತ್ತು ಪೋಷಕರ ಸಹಕಾರದೊಂದಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಚಿತ್ತಾರ ಬಿಡಿಸಿ ಖುಷಿಪಟ್ಟರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದುವರಿದು ಸರಕಾರಿ ಪ್ರೌಢಶಾಲೆ ಗುತ್ತಿಗಾರು, ಕಿರಿಯ ಪ್ರಾಥಮಿಕ ಶಾಲೆ ಹರಿಪುರ-ಬಳ್ಳಕ ಮತ್ತು ಪೈಕ, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು ಮತ್ತು ಕಮಿಲ ಇಲ್ಲಿನ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಚಿತ್ರ ಬಿಡಿಸಿದರು.

ಕೊನೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿ ಚಿತ್ತಾರ ಮೂಡಿಬಂದಿತು. ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ.ಬಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಲಹೆ ನೀಡಿದರು.

ಭಾಗವಹಿಸಿದ ಪ್ರತೀ ಶಾಲೆಯ ಶಿಕ್ಷಕರು/ಅತಿಥಿ ಶಿಕ್ಷಕರು ಸಹಕರಿಸಿದರು. ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಏಳು ಶಾಲೆಗಳ 135 ವಿದ್ಯಾರ್ಥಿಗಳು ಚಿಣ್ಣರ ಚಿತ್ತಾರ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನದ ಯಶಸ್ವಿಗೆ ಸಹಕರಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷಾ.ಎಸ್.ಎಂ ಅಭಿಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!