ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಿದ್ದು, ತಹಶಿಲ್ದಾರರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಯಾವುದೇ ಕೆಲಸಗಳಿಗೆ ತಹಶೀಲ್ದಾರ್ ಅಥವಾ ಕಂದಾಯ ಇಲಾಖೆಯ ಸಿಬ್ಬಂದಿಗೆ ಲಂಚ ನೀಡಬೇಕಿಲ್ಲ. ತಹಶಿಲ್ದಾರರ ಹೆಸರು ದುರುಪಯೋಗಪಡಿಸಿಕೊಂಡು ಈಗಾಗಲೇ ಕೆಲವು ತಳಮಟ್ಟದ ಸಿಬ್ಬಂದಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದಾರೆಂದು ದೂರುಗಳು ಕೇಳಿಬಂದಿತ್ತು.
ಇನ್ನು ಮುಂದೆ ಸಾರ್ವಜನಿಕರಿಂದ ಅಧಿಕಾರಿಗಳು ಅಥವಾ ಮದ್ಯವರ್ತಿಗಳು ಲಂಚ ಕೇಳುವ ಬಗ್ಗೆ ಕಂಡುಬಂದರೆ ತಕ್ಷಣ ಸುಳ್ಯ ತಹಶಿಲ್ದಾರರ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕು. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.