ದ.25ರಂದು ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಯುವ ಸಾಧಕರಿಗೆ ಸನ್ಮಾನ ರಾತ್ರಿ ತುಳು ನಾಟಕ
ದ .26ರಂದು ಕೆ.ವಿ.ಜಿ. ಸಂಸ್ಮರಣೆ – ಸಾಧನಾಶ್ರೀ ಪ್ರಶಸ್ತಿ ಪ್ರದಾನ – ರಂಗರೂಪಕ
ಆಧುನಿಕ ಸುಳ್ಯದ ನಿರ್ಮಾತೃ ದಿ| ಡಾ| ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬವನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಸುಳ್ಯ ಹಬ್ಬವನ್ನಾಗಿ 2011ರಿಂದ ಆಚರಿಸಲಾಗುತ್ತಿದ್ದು, ದ.25 ಹಾಗೂ 26ರಂದು ಈ ಬಾರಿಯ ಸುಳ್ಯ ಹಬ್ಬ ನಡೆಯಲಿದೆ.
ದ.8ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲುರವರು ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ದ.25ರಂದು ಬೆಳಗ್ಗೆ 9 ರಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದ
ಮುಂಭಾಗದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆರಂಭಗೊಳ್ಳಲಿದೆ.
ಕ್ರೀಡಾ ಸ್ಪರ್ಧೆ : ಸುಳ್ಯ ತಾಲೂಕಿನ ವಲಯಕ್ಕೆ ಸಂಬಂಧಪಟ್ಟ ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ಕಬಡ್ಡಿ ಪಂದ್ಯಾಟ ಹಾಗೂ ಪ.ಪೂ. ಕಾಲೇಜಿನ ಬಾಲಕರಿಗೆ ವಾಲಿಬಾಲ್ ಪಂದ್ಯಾಟ. ಭಾಗವಹಿಸುವ ತಂಡಗಳು ಡಿ.20 ರ ಒಳಗೆ ಕ್ರೀಡಾಕೂಟದ ಸಂಚಾಲಕರಾದ ಎ.ಸಿ.ವಸಂತ (9449593099) ಇವರಲ್ಲಿ ನೋಂದಾಯಿಸಿಕೊಳ್ಳುವುದು, ಬಳಿಕ ಬಂದ ತಂಡಗಳಿಗೆ ಅವಕಾಶವಿಲ್ಲ.
ಸಾರ್ವಜನಿಕರಿಗೆ ಹಗ್ಗಜಗ್ಗಾಟ : ದ.25ರಂದು ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಘ ಸಂಸ್ಥೆಗಳ ಸದಸ್ಯರು ಇದರಲ್ಲಿ ಭಾಗವಹಿಸಹುದಾಗಿದ್ದು ಪುರುಷರು ಮತ್ತು ಮಹಿಳೆಯರ ತಂಡಗಳಿಗೆ ಪ್ರತ್ಯಪ್ರತ್ಯೇಕ ಹಗ್ಗ ಜಗ್ಗಾಟವಿರುತ್ತದೆ.
ಸಾಂಸ್ಕೃತಿಕ ಸ್ಪರ್ಧೆಗಳು : ಎಲ್.ಕೆ.ಜಿ., ಯು.ಕೆ.ಜಿ. ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ನೀಡಿದ ಚಿತ್ರಕ್ಕೆ ಬಣ್ಣ ತುಂಬುವುದು. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿದ ಚಿತ್ರಕ್ಕೆ ನಭ್ಭ ತುಂಬುವುದು. 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಗೀತೆ ಗಾಯನ ಹಾಗೂ ಸಮೂಹ ನೃತ್ಯ. 8ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಹಾಗೂ ಜನಪದ ಗೀತೆ ವೈಯಕ್ತಿಕ. ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ಕೆ.ವಿ.ಜಿ.ಯವರ ಬಗ್ಗೆ ಭಾಷಣ ಹಾಗೂ ಭಾವಗೀತೆ ವೈಯಕ್ತಿಕ. ಪದವಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ – ಆಶು ಭಾಷಣ ಹಾಗೂ ಕವನ ರಚನೆ. ಸಾರ್ವಜನಿಕ ಪುರುಷರಿಗೆ ಚಿತ್ರಗೀತೆ, ಮಿಮಿಕ್ರಿ ಹಾಗೂ ರಸಪ್ರಶ್ನೆ ಕಾರ್ಯಕ್ರಮ. ಸಾರ್ವಜನಿಕ ಮಹಿಳೆಯರಿಗೆ ಚಿತ್ರಗೀತೆ, ಪುಷ್ಪ ರಂಗೋಲಿ, ಹಾಗೂ ರಸಪ್ರಶ್ನೆ.
ಒಂದು ಶಾಲೆಯಿಂದ ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಅವಕಾಶ. ಭಾಗವಹಿಸುವ ಸ್ಪರ್ಧಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಚಂದ್ರಮತಿ ಕೆ. (9481507515+ ಇವರನ್ನು ಸಂಪರ್ಕಿಸಬಹುದು.
ಡಿ.25ರಂದು ಬೆಳಗ್ಗೆ ತಾಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುವುದು. ಬೆಳಗ್ಗೆ ಉದ್ಘಾಟನೆ ನಡೆದ ಬಳಿಕ ಯೋಗಾಸನ ಪ್ರದರ್ಶನ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಇವರಿಂದ.
ಯುವ ಸಾಧಕರಿಗೆ ಸನ್ಮಾನ : ಡಿ.25ರಂದು ಸಂಜೆ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯುವುದು. ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಮನೋರಂಜನಾ ಕಾರ್ಯಕ್ರಮ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯುವುದು.ಕೆ.ವಿ.ಜಿ. ಸುಳ್ಳ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಾಧಕರನ್ನು ಸನ್ಮಾನಿಸುವರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಎ.ಒ.ಎಲ್.ಇ. ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಭಾಗವಹಿಸುವರು. ಸಮಾರಂಭದಲ್ಲಿ ಸಚಿನ್ ಪ್ರತಾಪ್ (ಕ್ರೀಡೆ), ಮೇಜರ್ ಡಾ| ಕುಶ್ವಂತ್ ಕೋಳಿಬೈಲು (ವೈದ್ಯಕೀಯ), ಸಂತೋಷ್ ಕೊಡೆಂಕಿರಿ (ಚಿತ್ರರಂಗ), ಶ್ರೀಮತಿ ಭವ್ಯಶ್ರೀ ಕುಲ್ಕುಂದ (ಯಕ್ಷಗಾನ), ಮಂಜುನಾಥ ಬಂಗ್ಲೆಗುಡ್ಡೆ (ಸಾಂಸ್ಕೃತಿಕ), ಜಿತೇಂದ್ರ ಎಂ.ಎಂ (ಉದ್ಯಮ) ರವರನ್ನು ಅಭಿನಂದಿಸಲಾಗುವುದು, ಡಿ.25ರಂದು ಸಭಾ ಕಾರ್ಯಕ್ರಮದ ಬಳಿಕ ವಿಧಾತ್ರಿ ಕಲಾವಿದರು ಕೈಕಂಬ ಕುಡ್ಲ ಅಭಿನಯದ ತುಳು ಹಾಸ್ಯಮಯ ನಾಟಕ ಛೇ…! ಪ್ರದರ್ಶನಗೊಳ್ಳಲಿದೆ.
ಡಿ.26 ಕೆ.ವಿ.ಜಿ. ಸಂಸ್ಕರಣೆ : ಕೆ.ವಿ.ಜಿ, ಸಂಸ್ಮರಣೆ ಮತ್ತು ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಡಿ.26ರಂದು ಸಂಜೆ ಕೆ.ವಿ.ಜಿ. ಕಾನೂನು ಕಾಲೇಜು ಆವರಣದಲ್ಲಿ ನಡೆಯಲಿದ್ದು ಕೆ.ವಿ.ಜಿ. ಸುಳ್ಳ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ| ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹಾಗೂ ಹೆಸರಾಂತ ವೈದ್ಯರಾದ ಡಾ| ಆಂಜನಪ್ಪ ಟಿ.ಎಂ. ಕೆ.ವಿ.ಜಿ. ಸಂಸ್ಮರಣಾ ಭಾಷಣ ಮಾಡುವರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾ ಪ್ರಸಾದ್ ಕೆ.ವಿ. ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿಶ್ರಾಂತ ಒಂದು ಶಾಲೆಯಿಂದ ಪ್ರಾಂಶುಪಾಲ ಪ್ರೊ| ಬಾಲಚಂದ್ರ ಗೌಡ ಎಂ ಹಾಗೂ ಗ್ರೀನ್ ಹೀರೋ ಆಫ್ ಇಂಡಿಯಾ ಡಾ| ಆರ್.ಕೆ. ನಾಯರ್‌ರಿಗೆ ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಮನೆಯ ಹಸ್ತಾಂತರ : ಕೆ.ವಿ.ಜಿ. ಸುಳ್ಯ, ಹಬ್ಬ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ನೀಡಿದ ರೂ.1 ಲಕ್ಷ ಸಹಾಯಧನದೊಂದಿಗೆ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಉಬರಡ್ಕ ಮಿತ್ತೂರು ಗ್ರಾಮದ ಸುರ್ಯಮನೆ ಅನಂತರಾಮ ಇವರ ಪೂರ್ಣಗೊಳಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಡಿ.26ರಂದು ಬೆಳಗ್ಗೆ ನಡೆಯುವುದು. ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ಮೊಕ್ತೇಸರರಾದ ರತ್ನಾಕರ ಬಳ್ಳಡ್ಕ ಮನೆ ಹಸ್ತಾಂತರಿಸುವರು. ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಚಿತ್ರಕುಮಾರಿ, ಸುಳ್ಯ ರೇಂಜರ್ ಗಿರೀಶ್ ಆರ್ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಹರೀಶ್ ಉಬರಡ್ಕ, ಖಜಾಂಚಿ ಆನಂದ ಗೌಡ, ಪದಾಧಿಕಾರಿಗಳಾದ ಚಂದ್ರಶೇಖರ ಪೇರಾಲು, ಡಾ| ಎನ್.ಎ. ಜ್ಞಾನೇಶ್, ನಿಕಟ ಪೂರ್ವಾಧ್ಯಕ್ಷ ಪಿ.ಸಿ. ಜಯರಾಮ್, ಮಾಜಿ ಅಧ್ಯಕ್ಷ ಚಂದ್ರಾ ಕೋಲ್ಟಾ ರ್ ಉಪಸ್ಥಿತರಿದ್ದರು. ಹರೀಶ್ ಬಂಟ್ವಾಳ್ ಮತ್ತು ಎ.ಸಿ. ವಂಸತ ಇದ್ದರು.