ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಕಾಲವಧಿ ಉತ್ಸವವು ಡಿ.15 ರಿಂದ 19 ರವರೆಗೆ ನಡೆಯಲಿದೆ.
ಡಿ. 15 ರಂದು ತಂತ್ರಿವರ್ಯರ ಆಗಮನ, ರಾತ್ರಿ ಶುದ್ಧಿ ಕಲಶ. ಡಿ. 16 ರಂದು ಶ್ರೀ ಗಣಪತಿ ಹವನ, ಉಗ್ರಾಣ ತುಂಬಿಸುವುದು, ಬಿಂಬ ಶುದ್ಧಿ, ಕಲಶ ಪೂಜೆ, ಕಳಶಾಭಿಷೇಕ ನಾಗ ದೇವರಿಗೆ ಮತ್ತು ರಕ್ತೇಶ್ವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯುವುದು. ಸಂಜೆ ಭಜನಾ ಕಾರ್ಯಕ್ರಮ.ರಾತ್ರಿ ಜಾದೂ ಪ್ರದರ್ಶನ.
ರಾತ್ರಿ 8 ರಿಂದ ಶ್ರೀ ದೇವರ ಭೂತಬಲಿ, ನೃತ್ಯೋತ್ಸವ, ಪ್ರಸಾದ ವಿತರಣೆ ನಡೆಯುವುದು. ಡಿ.17 ರಂದು ಶ್ರೀ ಗಣಪತಿ ಹವನ, ನವಕ ಕಳಶಾಭಿಷೇಕ, ಪೂರ್ವಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಬಳಿಕ ಧಾರ್ಮಿಕ ಸಭೆ ನಡೆಯಲಿದೆ.
ಅಡ್ಪಂಗಾಯ ಶ್ರೀ ದುರ್ಗಾಪರಮೇಶ್ವರಿ ಭಂಡಾರದ ವತಿಯಿಂದ ಧನು ಪೂಜೆ ಜರುಗುವುದು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯುವುದು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡುವುದು ( ತೊಡಙಲ್) ಡಿ. 18 ರಂದು ಬೆಳಗ್ಗೆ ವಿಷ್ಣುಮೂರ್ತಿ ದೈವ ನಡಾವಳಿ, ಪ್ರಸಾದ ವಿತರಣೆ ಜರಗುವುದು. ಡಿ. 19 ರಂದು ಮಲೆದೈವಗಳಿಗೆ ಅಗೆಲು ಸೇವೆ ( ಮಂಜ ) ನಡೆಯುವುದು.
- Sunday
- November 24th, 2024