Ad Widget

ಗೆಲುವಿನ ದಿಕ್ಕು

. . . . . . .

ಬದುಕಿನಲ್ಲಿ ದಿಕ್ಕು ತೋಚದಾದರೂ ಗೆಲುವಿನ ದಿಕ್ಕನ್ನು ತಾಳ್ಮೆಯಿಂದ ಹುಡುಕಿ ಸಾಗಿದಾಗ ನೀ ಹುಡುಕಿದ ಗೆಲುವಿನ ಹಾದಿಯ ದಿಕ್ಕು ಎದುರಾಗುವುದು, ಬದುಕಿನಲ್ಲಿ ನೀ ಹುಡುಕಿದ ಗೆಲುವಿನ ಹಾದಿಯ ದಿಕ್ಕು ಎದುರಾಗುವುದು…
ಗೆಲುವಿನ ಹಾದಿಯಲ್ಲಿ ಸೋತಾಗ ಕುಗ್ಗದೇ, ಬಿದ್ದರೂ ಮತ್ತೆದ್ದು ಮುನ್ನಡೆದಾಗ, ಬದುಕಿನ ಜಿದ್ದಾಜಿದ್ದಿನ ಓಟದಲ್ಲಿ ಕಷ್ಟದಿಂದಲೇ ಮೇಲೆದ್ದು ನಿಲ್ಲುವ ಛಲವನ್ನು ತೋರಿದಾಗ ನೀ ಕಂಡ ಕನಸು ನನಸಾಗುವುದು, ಬದುಕಿನಲ್ಲಿ ನೀ ಕಂಡ ಕನಸು ನನಸಾಗುವುದು…
ಕಷ್ಟದಿಂದ ಗೆದ್ದಾಗ, ಗೆದ್ದು ಮೇಲೆ ಎದ್ದಾಗ, ಗೆಲುವಿನ ಶಿಖರವ ಮುಟ್ಟಿದಾಗ ಗೆದ್ದೇ ಎನ್ನುವ ಅಹಂಕಾರವ ನೀ ತೋರಿದರೆ ನಿನ್ನ ಗೆಲುವು ಕ್ಷಣಿಕವಾಗುವುದು, ಸೋಲು ಶಾಶ್ವತವಾಗುವುದು, ನಿನ್ನ ಬದುಕಿನಲ್ಲಿ ಸೋಲು ಶಾಶ್ವತವಾಗುವುದು…
“ಬದುಕಿನಲ್ಲಿ ಸೋತಾಗ ಕುಗ್ಗದಿರು, ಗೆದ್ದಾಗ ಹಿಗ್ಗದಿರು, ಅಹಂಕಾರವ ದೂರವಿಡು, ಪ್ರೀತಿ ಸ್ನೇಹದಿ ನಡೆದುಬಿಡು…”

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!