Ad Widget

ಕಂದಾಯ ಅಧಿಕಾರಿಗಳ ದಾಳಿ – ಕೆಂಪು ಕಲ್ಲು ಸಹಿತ ಲಾರಿ ವಶ

. . . . . . . . .

ಅಜ್ಜಾವರ ಗ್ರಾಮದಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ದೂರಿನ ಮೇರೆಗೆ ಲೋಕಾಯುಕ್ತ ದಾಳಿಯಾಗಿತ್ತು. ಮುಂದುವರಿದ ಭಾಗವಾಗಿ ಡಿ.13 ರಂದು ಬೆಳ್ಳಂಬೆಳಗ್ಗೆ ಕೇರಳ ಗಡಿಭಾಗದಿಂದ ಮಂಡೆಕೋಲು ಗಡಿಯನ್ನು ದಾಟಿ ಕೆಂಪು ಕಲ್ಲು ಸಾಗಾಟ ಮಾಡುವ ಮಾಹಿತಿ ಪಡೆದ ಕಂದಾಯ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಯು ಲಾರಿಯನ್ನು ತಡೆದು ಅಂತರಾಜ್ಯದಿಂದ ಸಾಗಾಟ ಮಾಡುತ್ತಿರು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ . ಸುಳ್ಯ ತಾಲೂಕಿನ ನಾನಾ ಕಡೆಗಳಲ್ಲಿ ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದು ಇದರ ವಿರುದ್ದ ಲೋಕಾಯುಕ್ತ ಸಮರ ಸಾರಿದ್ದು ಇದರ ಬೆನ್ನಲ್ಲೆ ಕಂದಾಯ ಇಲಾಖೆ ಎಚ್ಚೆತ್ತುಕೊಂಡು ನಿರಂತರ ದಾಳಿಗಳನ್ನು ಮಾಡುತ್ತಿದ್ದು ಅಕ್ರಮಗಳನ್ನು ತಡೆಯುವಲ್ಲಿ ಸಫಲರಾಗುವರೇ ಎಂದು ಕಾದು ನೋಡಬೇಕಿದೆ. ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಶರತ್, ಗ್ರಾಮ ಸಹಾಯಕ ಶಿವಣ್ಣ ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading