ತೋಟಗಾರಿಕೆ ಇಲಾಖೆ, ಸುಳ್ಯ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ ಚುಕ್ಕೆ ರೋಗ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಡಿ.10 ರಂದು ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ಮು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮಾರ್, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಸುಳ್ಳಿ ಉಪಸ್ಥಿತರಿರಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಡಿಸಿಆರ್ ವಿಜ್ಞಾನಿ ಶ್ರೀಮತಿ ಭಾಗ್ಯ, IISH ಪ್ರಾಂತೀಯ ಕೇಂದ್ರ ಅಪ್ಪಂಗಳ ಮಡಿಕೇರಿ ಇದರ ಮುಖ್ಯಸ್ಥರಾದ ಅಂಕೇ ಗೌಡ ಆಗಮಿಸಲಿದ್ದಾರೆ.