ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳ ಪೂಜಾಲಕಟ್ಚೆಯ ಪೋಲೀಸ್ ಠಾಣೆಯ ಪೊಲೀಸರು ದೌರ್ಜನ್ಯವನ್ನು ನಡೆಸಿದ್ದಾರೆಂದು ಖಂಡನೆ ವ್ಯಕ್ತಪಡಿಸಿರುವ ಸುಳ್ಯ ವಕೀಲರ ಸಂಘ ನಿರ್ಣಯ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಗೃಹ ಸಚಿವರಿಗೆ ಸುಳ್ಯ ತಹಶೀಲ್ದಾರರ ಮೂಲಕ ಡಿ.6 ರಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣ.ಕೆ, ಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು, ಪದಾಧಿಕಾರಿಗಳಾದ ಜಗದೀಶ್.ಡಿ.ಪಿ, ಹರ್ಷಿತ್ ಕಾರ್ಜ, ಆಬೂಬಕರ್ ಅಡ್ಕಾರ್, ಸತೀಶ್ ಕುಂಬಕ್ಕೋಡು ಹಾಗೂ ಹಿರಿಯ ವಕೀಲರಾದ ಭಾಸ್ಕರ್ ರಾವ್, ಸುಕುಮಾರ್ ಕೋಡ್ತುಗುಳಿ ಹಾಗೂ ವಕೀಲರಾದ ಹರೀಶ್ ಬೂಡುಪನ್ನೆ, ಪುರುಷೋತ್ತಮ ಮಲ್ಲಾಜೆ, ಚರಣ್ ಕಾಯರ, ಪ್ರತಿಭಾ ಪಾನತ್ತಿಲ, ಜಯಪ್ರಕಾಶ್ ಕಜೆತಡ್ಕ, ಚಂದ್ರಶೇಖರ ಉದ್ದಂತಡ್ಕ, ವಿಪುಲ್ ನೀರ್ಪಾಡಿ, ಸಾಗರ್ ಹಾಗೂ ಮತ್ತಿತರ ವಕೀಲರು ಉಪಸ್ಥಿತರಿದ್ದರು.
- Friday
- November 1st, 2024